ಚೀನಾದಲ್ಲಿ ಶುರು ಆಯ್ತು ಹೊಸ ತಳಿ ನ್ಯೂಮೋನಿಯಾ ಆತಂಕ

 ಎಲ್ಲರಿಗೂ ನಮಸ್ಕಾರ,

ಕೋವಿಡ್ ಸೋಂಕಿನ ನಂತರ ಚೀನಾದಲ್ಲಿ ಈಗ ಮತ್ತೊಂದು ಸೋಂಕು ಶುರುವಾಗಿದೆ ನ್ಯೂಮೋನಿಯಾ, ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬಂದಿದ್ದು ಎಲ್ಲರಲ್ಲಿ ಆತಂಕ ಉಂಟು ಮಾಡಿದೆ. ಈ ಸೋಂಕಿಗೆ ಮಕ್ಕಳೆ ಟಾರ್ಗೆಟ್, ಇದು ವೈರಲ್ ಇನ್ಫೆಕ್ಷನ್ ಆಗಿತ್ತು, ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತಿದೆ. ಚೀನಾ ಮತ್ತು ಅಮೆರಿಕ ದೇಶಕ್ಕೆ ಬಂದ ನಂತರ ನಮ್ಮ ಭಾರತಕ್ಕೂ ಕಾಲಿಟ್ಟಿದೆ. ಈ ಸೋಂಕು ನಮ್ಮ ರಾಜಧಾನಿ ಬೆಂಗಳೂರಿನಲ್ಲೂ ಕಳೆದ ಒಂದು ವಾರದಿಂದ ಕಂಡು ಬಂದಿದೆ. ನಮ್ಮ ರಾಜಧಾನಿಯಲ್ಲಿ ಶೇಕಡ 25ಕ್ಕೂ ಹೆಚ್ಚು ಸೋಂಕು ದೃಢಪಟ್ಟಿದೆ. 15 ವರ್ಷದ ಒಳಗಿನ ಮಕ್ಕಳಲ್ಲಿ ಹೆಚ್ಚು ಈ ಸೋಂಕು ದೃಢಪಟ್ಟಿದ್ದು, ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಪೋಷಕರು ಹುಷಾರಾಗಿ ಇರಬೇಕೆಂದು ಕೇಳಿಕೊಳ್ಳುತ್ತೇವೆ.

ನ್ಯೂಮೋನಿಯಾ ಸೋಂಕಿನ ರೋಗಲಕ್ಷಣಗಳು ;

* ಜ್ವರ

* ನೆಗಡಿ ಮತ್ತು ಕೆಮ್ಮು

* ಮೈಕೈ ನೋವು

* ಸುಸ್ತು

* ಉಸಿರಾಟದ ತೊಂದರೆ

ಇದನ್ನು ತಡೆಯಲು ಪೋಷಕರು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ಪೋಷಕರು ಮಕ್ಕಳ ಕಡೆ ಹೆಚ್ಚು ಗಮನ ಹರಿಸಬೇಕು ಮತ್ತು ಮಕ್ಕಳಿಗೆ ಶೀತವಾಗದಂತೆ ನೋಡಿಕೊಳ್ಳಬೇಕು. ಮಕ್ಕಳನ್ನು ಯಾವಾಗಲೂ ಶುಚಿಯಾಗಿಡಬೇಕು‌.

 ಧನ್ಯವಾದಗಳು.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು?!!

ಕಿಡ್ನಿಯ ಬಗ್ಗೆ ವಿವರಗಳು? ಹಿಂದೂ ವಿಶ್ವ ಕಿಡ್ನಿ ದಿನ!!

ಸದ್ಯದಲ್ಲಿ ಚಾಲಕರ ಹಿತ ಮೆಟ್ರೋ ರೈಲು ಆಗಮನ!