ಬಾಹ್ಯಾಕಾಶದಲ್ಲಿ ಮಿನುಗಿದ ಭಾರತ!!!.........
ಎಲ್ಲರಿಗೂ ನಮಸ್ಕಾರಗಳು,
ಹಲವು ರಂಗಗಳಲ್ಲಿ ಜಾಗತಿಕವಾಗಿ ಗಮನ ಸೆಳೆದಿರುವ ಭಾರತ ಕೃಷಿ ಮತ್ತು ವಿಜ್ಞಾನ ತಂತ್ರಜ್ಞಾನದಲ್ಲೂ ಈ ವರ್ಷ ಹಲವು ಮೈಲಿಗಲ್ಲುಗಳನ್ನು ದಾಖಲಿಸಿದ್ದು ವಿಶೇಷ. ಕರೋನ ಸೃಷ್ಟಿಸಿದ್ದ ಹಿನ್ನಡೆಯನ್ನು ನಿವಾರಿಸಿಕೊಂಡು ಮುಂದೆ ಇಟ್ಟಿದ್ದಲ್ಲದೆ ಹೊಸ ವಿಕ್ರಮಗಳನ್ನು ಸಾಕಾರಗೊಳಿಸಿದ್ದು ಹೆಮ್ಮೆಯ ಸಂಗತಿ. ಭಾರತ ಚಂದ್ರಯಾನದಲ್ಲಿ ಸಾಧಿಸಿದ ಯಶಸ್ಸನ್ನು ಜಗತ್ತಿನ ಬಹುತೇಕ ದೇಶಗಳು ಕೊಂಡಾಡಿದವು.
ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊಟ್ಟಮೊದಲ ಬಾರಿಗೆ ನೌಕೆಯನ್ನು ಇಳಿಸಿದ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿತು. ಆಗಸ್ಟ್ 23 ರಂದು ಈ ಐತಿಹಾಸಿಕ ಸಾಧನೆ ಮೂಲಕ ಭಾರತ ಗಣ್ಯ ರಾಷ್ಟ್ರಗಳ ಪಟ್ಟಿಗೆ ಸೇರಿತು. ಕಡಿಮೆ ವೆಚ್ಚದಲ್ಲಿ ಹಿರಿಯ ದಾದ ವಿಕ್ರಮ ಸಾಧಿಸಿದ ಇಸ್ರೋ ಸಂಸ್ಥೆಯನ್ನು ವಿಶ್ವದ ಮುಂದುವರೆದ ರಾಷ್ಟ್ರಗಳು ಮುಕ್ತ ಕಂಠದಿಂದಾಗಿಸಿದವು. ಈ ಮಹಾತ್ ಸಾಧನೆ ಬೆನ್ನಲ್ಲೇ ಸೆಪ್ಟೆಂಬರ್ 2 ರಂದು ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್ -1 ಉಪಗ್ರಹ ಉಡಾವಣೆ ಯಶಸ್ವಿಯಾಯಿತು.
ಈ ಸಾಧನೆಯ ನೇತೃತ್ವ ವಹಿಸಿರುವ ಇಸ್ರೋ ಅಧ್ಯಕ್ಷ ಡಾ.ಎಸ್. ಸೋಮನಾಥ್ ಅವರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಮುಖ ಬೆಳವಣಿಗೆಗಳು
* ಏಪ್ರಿಲ್ ನಲ್ಲಿ ಸ್ಪೇಸ್ ಎಕ್ಸ್ ಸ್ಟಾರ್ ಶಿಪ್ ಯೋಜನೆ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ವಿಫಲವಾಯಿತು.
* ಏಪ್ರಿಲ್ ನಲ್ಲಿ ನಾಸಾ ಹಾಗೂ ಕೆನಡಿಯನ್ ಸ್ಪೇಸ್ ಏಜೆನ್ಸಿ ಜಂಟಿಯಾಗಿ ಚಂದ್ರನಲ್ಲಿಗೆ ಗಗನ ಯಾತ್ರೆಗಳನ್ನು ಕಳಿಸಲು ಆರ್ಟಿ ಮಿಸ್ -2 ಯೋಜನೆ ಪ್ರಕಟಿಸಿತು.
* ಆಗಸ್ಟ್ ನಲ್ಲಿ ರಷ್ಯಾದ ಚಂದ್ರಯಾನ ಯೋಜನೆ ಲೂನ 25 ಚಂದ್ರನ ಸ್ಪರ್ಶಿಸುವ ವೇಳೆ ಅಪಘಾತಕೀಡಾಗಿ ವಿಫಲ.
* ಉದ್ಯಮಿ ವರ್ಜಿನ್ ಗಲಾಟೆಕ್ ಆಗಸ್ಟ್ ನಲ್ಲಿ ಬಾಹ್ಯಾಕಾಶ ನಿಲ್ದಾಣದ ಸಮೀಪಕ್ಕೆ ಪ್ರವಾಸಿಗನಾಗಿ ತೆರಳಿ ವಾಪಸ್ ಆದರೂ.
* ಸೆಪ್ಟೆಂಬರ್ ನಲ್ಲಿ ಜಪಾನ್ ಎಚ್ -2ಎ ರಾಕೆಟ್ ಮೂಲಕ ಚಂದ್ರನ ಬಳಿಗೆ ನೌಕೆಯನ್ನು ಕಳುಹಿಸುವಲ್ಲಿ ಯಶಸ್ವಿಯಾಗಿದೆ.
* ಮೊದಲ ಬಾರಿಗೆ ಕ್ಷುದ್ರ ಗ್ರಹದ ತುಣುಕುಂದನ್ನು ಧರೆಗೆ ತರುವ ನಾಸಾದ ಯೋಜನೆ ಅಕ್ಟೋಬರ್ ನಲ್ಲಿ ಯಶಸ್ವಿಯಾಯಿತು.
* ನವೆಂಬರ್ ನಲ್ಲಿ ಎಲಾನ್ ಮಸ್ ಒಡೆತನದ ಸ್ಪೇಸ್ ಎಕ್ಸ್ ಸ್ಟಾರ್ ಶಿಪ್ ಗಗನ ನೌಕೆ ಎರಡನೇ ಬಾರಿ ವಿಫಲವಾಯಿತು.
ಭಾರತದಾಚೆಗೂ ಯುಪಿಐ ಲಗ್ಗೆ
ನಗದುರಹಿತ ವಹಿವಾಟು ಈಗ ಸಾಮಾನ್ಯವಾಗಿದ್ದು ವಿವಿಧ ದೇಶಗಳಲ್ಲಿ ಜನಪ್ರಿಯವಾಗಿದೆ. ಭಾರತದಲ್ಲಿ ಡಿಜಿಟಲ್ ಇಂಡಿಯಾ ಪರಿಕಲ್ಪನೆ ಅಡಿ ಇಟ್ಟ ಬಳಿಕ ಯುನಿಫೈಡ್ ಪೇಮೆಂಟ್ ಇಂಟರ್ಸ್ಪೇಸ್ ಬಾರಿ ಸದ್ದು ಮಾಡಿದೆ. ಕಳೆದ ಆಗಸ್ಟ್ ನಲ್ಲಿ ಹತ್ತು ಶತಕೋಟಿ ವಹಿವಾಟಿಗೆ ಸಾಕ್ಷಿಯಾಯಿತು. 2023ರಲ್ಲಿ ವಾರ್ಷಿಕ 1.7 ತ್ರಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ. ಈ ಸೌಲಭ್ಯವನ್ನು ಭಾರತವು ಆಸ್ಟ್ರೇಲಿಯಾ, ಸಿಂಗಾಪುರ ,ಸೌದಿ ಅರೇಬಿಯನ್ ,ಓಮನ್, ನೇಪಾಳ್ ಹಾಗೂ ಇತರ ದೇಶಗಳೊಂದಿಗೆ ಹಂಚಿಕೊಂಡಿದೆ.
ಎಐ ಕ್ರಾಂತಿ
ಈ ವರ್ಷ ಕೃತಕ ಬುದ್ಧಿಮತ್ತೆ ಮತ್ತಷ್ಟು ಮುನ್ನೆಲೆಗೆ ಬಂದಿದೆ. ವಿಶ್ವದೆಲ್ಲೆಡೆ ಇದರ ಉಪಯೋಗಗಳನ್ನು ಹಲವು ಖಾಸಗಿ ಕಂಪನಿಗಳು ಹಾಗೂ ವಿಶ್ವವಿದ್ಯಾಲಯಗಳು ಪಡೆದುಕೊಂಡಿವೆ. ಭಾರತದಲ್ಲಿ ಮೊದಲ ಎಐ ನ್ಯೂಸ್ ಅಂಕಲ್ ಸನ್ನ ಟಿವಿ ಪರದೆಗೆ ಲಗ್ಗೆ ಇಟ್ಟಳು. ಇದರ ಬೆನ್ನಲ್ಲೇ ಕನ್ನಡ ಸಹಿತ ಕೆಲ ಪ್ರಾದೇಶಿಕ ಭಾಷೆಗಳ ವಾಹಿನಿಗಳು ಇದನ್ನು ಅನುಸರಿಸಿದವು. ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚಿದ ಪರಿಣಾಮ ಉದ್ಯೋಗ ನಷ್ಟವು ಆರಂಭವಾಯಿತು. ಪೇಟಿಎಂ ಸಂಸ್ಥೆ ಒಂದು ಸಾವಿರ ಉದ್ಯೋಗಿಗಳನ್ನು ಕೈಬಿಟ್ಟಿತ್ತು.
ಮನೆಗಳಲ್ಲೂ ರೋಬೋಟ್ ಬಳಕೆ
ಕೈಗಾರಿಕೆಗಳಿಗೆ ಸೀಮಿತವಾಗಿದ್ದ ರೋಬೋಟ್ಗಳು ಈಗ ಗಣಿ, ಪ್ರಯೋಗಾಲಯ, ಆಸ್ಪತ್ರೆ ಗಳಿಗೂ ಕಾಲಿರಿಸುವೆ. ಮನೆಗಳಿಗೆ ಕೆಲಸಕ್ಕೆ ಸಹಾಯ ಮಾಡುವ ಸ್ಮಾರ್ಟ್ ರೋಬೋಟ್ ಗಳನ್ನು ಬರುವ ಮೂರು ನಾಲ್ಕು ವರ್ಷಗಳಲ್ಲಿ ಹೊಸ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಜನರಿಗೆ ಒದಗಿಸುವ ಭರವಸೆಯನ್ನು ಪ್ರಕಟಿಸಿದ್ದಾರೆ. ಇದು ಇನ್ನಷ್ಟು ಕ್ಷೇತ್ರಗಳಲ್ಲಿ ಬಳಕೆಗೂ ಬಾಗಿಲು ತೆರೆಯಲು ಅವಕಾಶ ಮಾಡಿಕೊಟ್ಟಿದೆ.
ಬದಲಾದ ಟ್ವಿಟರ್
ಸಾಮಾಜಿಕ ಜಾಲತಾಣದ ಮುಂಚೂಣಿ ವೇದಿಕೆ ಟ್ವಿಟರ್ ತನ್ನ ಲೋಗೋ ಬದಲಿಸಿ ಬಾರಿ ಸುದ್ದಿ ಮಾಡಿತು. ನೀಲಿ ವರ್ಣದ ಹಕ್ಕಿಯ ಬದಲು ಕಪ್ಪು ಬಣ್ಣದ ಎಕ್ಸ್ ಮಾದರಿಗೆ ರೂಪಾಂತರಗೊಂಡಿರುವುದನ್ನು ಕಂಪನಿಯ ಮುಖ್ಯಸ್ಥ ಎಲಿನ್ ಮಸ್ಕ್ ಪ್ರಕಟಿಸಿದರು. ಇದು ಪರಾ ವಿರೋಧಕ ಚರ್ಚೆಗೆ ತ್ರಾಸ ಒದಗಿಸಿದರು ಬಳಕೆದಾರರು ಎಕ್ಸ್ ನೊಂದಿಗೆ ಹೊಸ ಸಂಬಂಧವನ್ನು ಮುಂದುವರಿಸಲು ಸಾಥ್ ನೀಡಿದ್ದಾರೆ.
ಧನ್ಯವಾದಗಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ