ಚಳಿಗಾಲದಲ್ಲೂ ಇಳಿಯದ ಎಳನೀರ ಬೆಲೆ!!?
ಎಲ್ಲರಿಗೂ ನಮಸ್ಕಾರಗಳು,
ಬಹುತೇಕ ಸ್ಥಳಗಳಲ್ಲಿ 40 ಕೆಳಗಡೆ 50 ರೂಗೆ ಮಾರಾಟ ಮಧ್ಯವರ್ತಿಗಳಿಗೆ ಹೆಚ್ಚಿನ ಲಾಭ.ಆರೋಗ್ಯಕ್ಕೆ ಉತ್ತಮ ಪಾನೀಯ ಎಂಬ ಕಾರಣಕ್ಕೆ ಬಹುತೇಕ ಮಂದಿ ಎಳನೀರು ಮೊರೆ ಹೋಗುತ್ತಾರೆ. ಬೇಸಿಗೆಯಲ್ಲಿ ಯಥೇಚ್ಛವಾಗಿ ಮಾರಾಟವಾಗುವ ಎಳನೀರು ಚಳಿಗಾಲದಲ್ಲಿ ಅಷ್ಟಾಗಿ ವಿಲೇವಾರಿ ಆಗದು ಹೀಗಾಗಿ ದರದಲ್ಲಿ ಅರ್ಧದಷ್ಟು ಇಳಿಕೆ ಆಗುವುದುಂಟು. ಆದರೆ ಈ ಬಾರಿ ಎಳನೀರು ಬೆಲೆ ದುಬಾರಿಯಾಗಿಯೇ ಮುಂದುವರೆದಿದೆ. ಬರ ಆವರಿಸಿರುವುದು ಹಾಗೂ ತೆಂಗು ಬೆಳೆ ಇಳುವಳಿಯಲ್ಲಿನ ಇಳಿಕೆಯ ನೇರ ಪರಿಣಾಮ ಎಳನೀರ ಮೇಲು ಆಗಿದೆ ಎನ್ನಲಾಗುತ್ತಿದೆ. ಹಾಗಾಗಿ ದೂರದ ಊರುಗಳಿಂದ ಎಳನೀರು ಖರೀದಿಸಿ ತಂದು ನಗರದಲ್ಲಿ ಮಾರಾಟ ಮಾಡಲು ಹೆಚ್ಚು ಹಣ ಭಯವಾಗುತ್ತಿದೆ ಎಂಬುದು ವ್ಯಾಪಾರಸ್ಥರ ಅನಿಸಿಕೆ.
ಸಾಮಾನ್ಯವಾಗಿ ಮಂಡ್ಯ ಮೈಸೂರ್ ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳ ವಿವಿಧ ಭಾಗಗಳಿಂದ ಎಳನೀರು ಆಮದಾಗುತ್ತದೆ. ಪ್ರಸ್ತುತ ಒಂದು ಎಳನೀರ ಬೆಲೆ ರೂ. 40 ಇದೆ ಕೆಲವೆಡೆ 45 ರೂಗಳಿಗೂ ಮಾರಾಟ ಮಾಡಲಾಗುತ್ತಿದೆ ಕಳೆದ ವರ್ಷ ಇದೆ ಅವಧಿಯಲ್ಲಿ 35 ಇತ್ತು. ಬೆಳೆಗಾರರ ಕೈಗೆ ಮಾತ್ರ ಸ್ವಲ್ಪ ಹಣ ಸಿಗುತ್ತಿದೆ ವ್ಯಾಪಾರಿಗಳಿಗೂ ಅಷ್ಟಾಗಿ ಲಾಭ ಸಿಗುತ್ತಿಲ್ಲ ಬಹುತೇಕ ದುಡ್ಡು ಮಧ್ಯವರ್ತಿಗಳ ಪಾಲಾಗುತ್ತಿದೆ ಎಂಬುದು ತಿಳಿದಿದೆ.
ಧನ್ಯವಾದಗಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ