ಪೆಟ್ರೋಲ್, ಡೀಸೆಲ್ ಬೆಲೆ ಸದ್ಯದಲ್ಲೇ ಇಳಿಕೆ ಸಾಧ್ಯತೆ; ಚುನಾವಣೆಯೊಂದೇ ಕಾರಣವಲ್ಲ; ಮತ್ತಿನ್ನೇನು ಕಾರಣ?
ಎಲ್ಲರಿಗೂ ನಮಸ್ಕಾರ,
ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಗೆ ಮುಂದಾಗಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಆದರೂ ಕೂಡ ಪೆಟ್ರೋಲ್ ಬೆಲೆ ಇಳಿಕೆಗೆ ಜಾಗತಿಕ ಕಚ್ಚಾ ತೈಲ ಬೆಲೆಗಳೂ ಒಂದು ಕಾರಣವಾಗಿವೆ.
ಕಚ್ಛಾ ತೈಲ ಬಹಳ ತಿಂಗಳಿಂದ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳಿಗೆ ಕಡಿಮೆ ಬೆಲೆಗೆ ಸರಬರಾಜು ಆಗುತ್ತಿದೆ. ಈಗ ಇನ್ನಷ್ಟು ಕಡಿಮೆ ಬೆಲೆಗೆ ತೈಲ ಸರಬರಾಜು ಆಗುತ್ತಿದೆ. ಬಹಳ ವರ್ಷಗಳ ಬಳಿಕ ಒಎಂಸಿಗಳು, ಅಂದರೆ ಇಂಡಿಯನ್ ಆಯಿಲ್ನಂತಹ ತೈಲ ಮಾರುಕಟ್ಟೆ ಸಂಸ್ಥೆಗಳು ಲಾಭದ ಹಳಿಗೆ ಬಂದಿವೆ. 2022ರಲ್ಲಿ ಒಎಂಸಿಗಳು ಒಂದು ಲೀಟರ್ ಪೆಟ್ರೋಲ್ ಮಾರಾಟದಲ್ಲಿ 17 ರೂ ಹಾಗೂ ಡೀಸೆಲ್ನಿಂದ 35 ರೂ ನಷ್ಟ ಮಾಡಿಕೊಂಡಿದ್ದವು. ಈ ವರ್ಷ ಒಂದು ಲೀಟರ್ ಪೆಟ್ರೋಲ್ ಮೇಲೆ 8-10 ರೂ ಹಾಗೂ ಡೀಸೆಲ್ ಮೇಲೆ 3-4 ರೂ ಲಾಭ ಮಾಡಿಕೊಳ್ಳುತ್ತಿವೆ. ಈ ಕಾರಣಕ್ಕೆ ಲಾಭದ ಕೆಲ ಅಂಶವನ್ನು ಗ್ರಾಹಕರಿಗೆ ವರ್ಗಾಯಿಸಲು ತೈಲ ಕಂಪನಿಗಳಿಗೆ ಸರ್ಕಾರ ಸೂಚಿಸುತ್ತಿದೆ ಎನ್ನಲಾಗುತ್ತಿದೆ.
ಭಾರತದ ಸರ್ಕಾರಿ ಸ್ವಾಮ್ಯದ ಆಯಿಲ್ ಮಾರ್ಕೆಟಿಂಗ್ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ), ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್ಪಿಸಿಎಲ್) ಮತ್ತು ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಈ ಮೂರು ಸಂಸ್ಥೆಗಳು ಒಟ್ಟು ಸೇರಿ ಕಳೆದ ಕ್ವಾರ್ಟರ್ನಲ್ಲಿ (ಜುಲೈನಿಂದ ಸೆಪ್ಟೆಂಬರ್) 28,000 ಕೋಟಿ ರೂ ಲಾಭ ಮಾಡಿದ್ದವು. ಈ ಕಂಪನಿಗಳ ನಷ್ಟದ ಹಂತ ಮುಗಿದಿರುವುದರಿಂದ ಗ್ರಾಹಕರಿಗೆ ಈ ಲಾಭ ವರ್ಗಾವಣೆ ಆಗಬೇಕೆಂಬುದು ಸರ್ಕಾರದ ನಿಲುವು. ಈ ನಿಟ್ಟಿನಲ್ಲಿ ಸರ್ಕಾರವು ಒಎಂಸಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.
ಧನ್ಯವಾದಗಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ