ಶೂನ್ಯ ಇಂಗಾಲಕ್ಕಾಗಿ ಒಮ್ಮತ........,
ಎಲ್ಲರಿಗೂ ನಮಸ್ಕಾರಗಳು
ಹವಮಾನ ಬದಲಾವಣೆಯಿಂದಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತವೆ. ಇದಕ್ಕೆ ಇಂಗಾಲದಿಯಿಂದಾಗುತ್ತಿರುವ ಮಾಲಿನ್ಯ ನೇರ ಕಾರಣವಾಗಿದೆ. ಪ್ಯಾರಿಸ್ ಶೃಂಗದಳಾಗಿರುವ ಒಪ್ಪಂದವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ವಾಗ್ದಾನವನ್ನು ಮುಂದುವರಿದ ದೇಶಗಳು ನೀಡಿವೆ. ಭಾರತ ಕೂಡ 2050 ಕ್ಕೆ ಶೇಕಡಾ 50 ಹಾಗೂ 2020ರ ವೇಳೆ ಶೂನ್ಯ ಇಂಗಾಲ ಘೋಷಣೆಯನ್ನು ಸಾಕಾರಗೊಳಿಸುವ ಲಕ್ಷ್ಯ ಹರಿಸಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದೆ.
ಯು ಏ ಈ ಯಲ್ಲಿ ಎಮ್ಮಿ ರೇಟ್ ವಿಮಾನಯಾನ ಸಂಸ್ಥೆ ಮುಖ ಚಹರೆ ಆದರಿಸಿ ಪ್ರಯಾಣಿಕರಿಗೆ ಬೋರ್ಡಿಂಗ್ ಗೆ ಅವಕಾಶ ನೀಡುವ ಸೌಲಭ್ಯವನ್ನು ನವೆಂಬರ್ ನಿಂದ ಪರಿಚಯಿಸಿದೆ. ಇದಕ್ಕಾಗಿ ಎಐ ತಂತ್ರಜ್ಞಾನವನ್ನು ಬಳಸಲಾಗಿದೆ. ಹೆಚ್ಚು ಸಮಯ ತಪಾಸನೆ ಸ್ಥಳದಲ್ಲಿ ನಿಲ್ಲುವ ಪ್ರಮೇಯ ಇರದು, ಪ್ರಯಾಣಿಕ ನೊಬ್ಬ ನಡೆದುಕೊಂಡು ಬರುತ್ತಿದ್ದಂತೆ ಆತನ ಮುಖ ಚಹರೆ ಸೆರೆಹಿಡಿದು, ಮಾಹಿತಿ ಹೆಚ್ಚಿನ ಪ್ರವೇಶಿಸಲು ಅವಕಾಶ ಮಾಡಿಕೊಡಲಿದೆ.
ಬಡವರಿಗೆ ಅಕ್ಕಿ ವಿತರಣೆ
ದೇಶದಲ್ಲಿ ಆಹಾರ ಭದ್ರತೆ ಅಡಿಯಲ್ಲಿ ಬಡವರಿಗೆ ವಿತರಿಸಲಾಗುತ್ತಿರುವ ಉಚಿತ ಅಕ್ಕಿಯನ್ನು ಇನ್ನು ಐದು ವರ್ಷ ಮುಂದುವರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಬಿಪಿಎಲ್ ,ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ವ್ಯಕ್ತಿಗಳಿಗೆ ತಲ ಐದು ಕೆಜಿ ಅಕ್ಕಿ ನೀಡಲಾಗುತ್ತಿದೆ.ಇದರಿಂದ 81.35 ಕೋಟಿ ಜನರಿಗೆ ಅನುಕೂಲವಾಗಲಿದೆ ಕೃಷಿ ಬೆಳೆದು ಆದಾಯ ವೃದ್ಧಿಗೂ ಅವಕಾಶ ಕಲ್ಪಿಸಿದೆ.
ಸಿರಿಧಾನ್ಯ ಬಳಕೆಗೆ ಉತ್ತೇಜನ
ಜಾಗತಿಕ ಸಿರಿಧಾನ್ಯ ವರ್ಷವನ್ನು ಭಾರತ ಸೇರಿ ವಿಶ್ವದ 73 ರಾಷ್ಟ್ರಗಳಲ್ಲಿ ಆಚರಿಸಲಾಯಿತು. ವರ್ಷದುದ್ದಕ್ಕೂ ಮಿಲ್ಲೆಟ್ ಕುರಿತು ಸಮ್ಮೇಳನ, ಶೃಂಗಸಭೆ ,ಸಂವಾದ ,ಚರ್ಚಾಗೋಷ್ಠಿ ನಡೆದವು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಿರಿಧಾನ್ಯ ಉತ್ಪನ್ನಗಳ ಬೆಲೆಗಳಿಗೆ ಹೆಚ್ಚಿನ ಅನುದಾನ ನಿಗದಿ ಮಾಡಿ ರೈತರ ಬೆಂಬಲಕ್ಕೆ ನಿಂತಿವೆ .ಪೌಷ್ಟಿಕಾಂಶಗಳ ಅದರ ವಾಗಿರುವ ಸಿರಿಧಾನ್ಯವನ್ನು ಪಡಿತರ ಮೂಲಕ ಜನರಿಗೆ ಒದಗಿಸಲು ಕೇಂದ್ರ ಸರ್ಕಾರದಿಂದ ಆಯಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.
ಔಷದ ಸಿಂಪಡಣೆಗೆ ಡ್ರೋನ್
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಡ್ರೋನ್ ಬಳಕೆ ಹೆಚ್ಚುತ್ತಿದೆ. ಭಾರತೀಯರು ಕೂಡ ಇಂತಹ ತಂತ್ರಜ್ಞಾನ ಆಧಾರಿತ ಚಟುವಟಿಕೆ ಕೈಗೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ .ಬೆಳೆಗಳಿಗೆ ಡ್ರೋನ್ ಮೂಲಕ ಔಷದ ಸಿಂಪಡಣೆ ಮಾಡಬಹುದಾಗಿದೆ .ದ್ರವರೂಪದ ನ್ಯಾನೋ ಯೂರಿಯ ಬಳಕೆಗೂ ಉತ್ತೇಜನ ದೊರೆತಿದೆ. ಬೀಜಗಳ ಗುಣಮಟ್ಟ ಪರೀಕ್ಷೆ ಗ್ರಿಡಿಂಗು ಕೃತಕ ಬುದ್ಧಿ ಮತ್ತು ತಂತ್ರಜ್ಞಾನ ಬಳಸುವ ಪ್ರಯೋಗಕ್ಕೆ ಚಾಲನೆ ದೊರೆತಿದೆ.
10 ರಾಜ್ಯಗಳಲ್ಲಿ ಬರದ ಛಾಯೆ
ದೇಶದಲ್ಲಿ ಈ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿಯದ ಕಾರಣ ಜಲ ಸಂಕಟ ಎದುರಾಗಿದೆ .ಕರ್ನಾಟಕ ಸೇರಿ ದಕ್ಷಿಣ ಹಾಗೂ ಉತ್ತರ ಭಾರತದ 10 ರಾಜ್ಯಗಳು ಅನಾವೃಷ್ಟಿ ಎದುರಿಸುತ್ತಿದೆ. ಕೇಂದ್ರ ಸರ್ಕಾರ ಭತ್ತ, ಕಬ್ಬು ಸೇರಿ ಹಲವು ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಿಸಿ ರೈತರ ಕೈ ಹಿಡಿದಿದೆ. ಆದರೂ ಇನ್ನಷ್ಟು ಪರಿಹಾರ ಒದಗಿಸಬೇಕು ಎಂಬುದಾಗಿ ಆಯಾ ರಾಜ್ಯ ಸರ್ಕಾರಗಳು ಹಾಗೂ ಕೃಷಿಕರು ಒತ್ತಾಯಿಸಿದ್ದಾರೆ. ಕರ್ನಾಟಕ ದಲ್ಲಂತೂ 236 ತಾಲೂಕುಗಳ ಪೈಕಿ 223 ರಲ್ಲಿ ಬರಹರಿಸಿದೆ. ಇದರಿಂದ ಒಟ್ಟು 48.19 ಲಕ್ಷ ಇಟ್ಟು ಪ್ರದೇಶಗಳಲ್ಲಿ ಬೆಳೆ ನಾಷ್ಟವಾಗಿದೆ. ಸಂಬಂಧಿತ ವಲಯಕ್ಕೆ ಹೊಡೆತ ಬಿದ್ದಿದೆ ,ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ಅಕ್ಕಿ ಸೇರಿದಂತೆ ವಿವಿಧ ಬೆಳೆ ಕಾಳುಗಳ ದರ ಗಗನಕೇರಿದೆ. ರೈತರಿಗೆ ಮಧ್ಯಂತರ ವಿಮೆ ಪರಿಹಾರಕ್ಕೆ ರಾಜ್ಯ ಸರ್ಕಾರ 6.5 ಲಕ್ಷ ರೈತರಿಗೆ 460 ಕೋಟಿ ರೂ ಹಾಗೂ ಕುಡಿಯುವ ನೀರು ಅಥವಾ ಮೇವು ಸರಬರಾಜುಗೆ 327 ಕೋಟಿ ಬಿಡುಗಡೆ ಮಾಡಿದೆ , ಜೊತೆಗೆ ರೈತರಿಗೆ ತಲಾ ಎರಡು ಸಾವಿರ ರೂ ಬೆಲೆ ಪರಿಹಾರ ನೀಡುವ ಪ್ರಕ್ರಿಯೆ ಆರಂಭವಾಗಿದೆ.
ಧನ್ಯವಾದ......
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ