ಹೊಸ ವರ್ಷ ಹೊಸ ನಿಯಮ?!
ಎಲ್ಲರಿಗೂ ನಮಸ್ಕಾರಗಳು
ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದೆ ಹಲವು ಬದಲಾವಣೆ ಈ ಹೊಸ ವರ್ಷದ ಹೊಸ ನಿಯಮಗಳು....,,
ಹಳೆ ವರ್ಷ ಮರಳಿಬಾರದಂತೆ ಹುರುಳಿ ಹೋಗಿದೆ ,ಜಗತ್ತೇ ಹೊಸ ವರ್ಷಕ್ಕೆ ಹೊರಳಿದೆ .ಬದಲಾಗಿದ್ದು ಬರೀ ಕ್ಯಾಲೆಂಡರ್ ಮಾತ್ರವಲ್ಲ ಅದರ ಹೊರತಾಗಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಆ ಪೈಕಿ ಸಾರ್ವಜನಿಕರ ದೈನಂದಿನ ಜೀವನದ ಮೇಲೆ ಪರಿಣಾಮ ಇರುವಂತಹ ಕೆಲವು ಬದಲಾವಣೆ ಬೆಳವಣಿಗೆಗಳ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ ....
* ಆಧಾರ್ ಉಚಿತ ತಿದ್ದುಪಡಿ :
ಆದಾರ್ ವಿವರಗಳನ್ನು ಆನ್ಲೈನಲ್ಲಿ ಉಚಿತವಾಗಿ ಸಕಾಲಿಕಗೊಳಿಸುವ ಗಡುವು ಡಿಸೆಂಬರ್ 31ಕ್ಕೆ ಮುಗಿದಿದೆ. ಇನ್ನೇನಿದ್ದರೂ ಈ ಪ್ರಕ್ರಿಯೆಗೆ ರೂ.50 ಶುಲ್ಕ ವಿಧಿಸಲಾಗುತ್ತದೆ.
* ಸಿಮ್ ಕಾರ್ಡ್ ಕೆ ವೈ ಸಿ :
ಮೊಬೈಲ್ ಫೋನ್ ಬಳಕೆದಾರರು ಹೊಸ ಸಿಮ್ ಖರೀದಿಸಬೇಕಾದರೆ ಸಲ್ಲಿಸುವ ಪೇಪರ್ ಆಧರಿತ ಗ್ರಾಹಕರ ವಿವರ ಕೆವೈಸಿ ಡಿಸೆಂಬರ್ 31ಕ್ಕೆ ಕೊನೆಯಾಗಿದೆ .ದೂರ ಸಂಪರ್ಕ ಇಲಾಖೆಯ ನಿಯಮಗಳ ಪ್ರಕಾರ ಜನವರಿ ಒಂದರಿಂದ ಡಿಜಿಟಲ್ ಕೆ ವೈ ಸಿ ಮೂಲಕವೇ ಸಿಮ್ ನೀಡಲಾಗುತ್ತದೆ.
* ಸುಕನ್ಯ ಸಮೃದ್ಧಿ ಯೋಜನೆ ಬಡ್ಡಿದರ ಹೆಚ್ಚಳ:
ಸುಕನ್ಯ ಸಮೃದ್ಧಿ ಸೇರಿದಂತೆ ಕೆಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ಹೆಚ್ಚಿಸಿದೆ. ಸುಕನ್ಯ ಸಮೃದ್ಧಿ ಯೋಜನೆ ಯ ಬಡ್ಡಿ ದರ 20 ಮೂಲಾಂಶಗಳಷ್ಟು ಮತ್ತು ಮೂರು ವರ್ಷಗಳ ಅವಧಿ ಠೇವಣಿಯ ಬಡ್ಡಿ ದರ 10 ಮೂಲಾಂಶಗಳಷ್ಟು ಡಿಸೆಂಬರ್ 29ರಂದು ಪರಿಷ್ಕರಿಸಲಾಗಿದೆ. ಈ ಬದಲಾವಣೆ ಜನವರಿಯಿಂದ ಮಾರ್ಚ್ ತ್ರೈಮಾಸಿಕಕ್ಕೆ ಅನ್ವಯಿಸಿ ಜಾರಿಗೆ ಬರಲಿದೆ. ಈ ಮೂಲಕ ಸುಖನ್ಯ ಸಮೃದ್ಧಿ ಯೋಜನೆ ಬಡ್ಡಿ ದರ ಶೇಖಡ ಎಂಟರಿಂದ ಶೇಕಡ 8.2ಗೆ ಮತ್ತು ಮೂರು ವರ್ಷಗಳ ಅವಧಿ ಠೇವಣಿಗೆ ಬಡ್ಡಿ ದರ ಏಳರಿಂದ ಶೇಕಡ 7.1ಕ್ಕೆರಲಿದೆ.
* ಕಾರುಗಳ ಬೆಲೆ ಏರಿಕೆ:
ಆಟೋಮೊಬೈಲ್ ಕ್ಷೇತ್ರದ ಮುಂಚೂಣಿ ಕಂಪನಿಗಳಾದ ಮಾರುತಿ ,ಸುಜುಕಿ ,ಹೋಂಡಾ ,ಮರ್ಸಿಡೆಸ್ ಮತ್ತು ಆಡಿ ಕಂಪನಿಗಳು ಈಗಾಗಲೇ ದರ ಏರಿಕೆಯನ್ನು ಘೋಷಣೆ ಮಾಡಿದ್ದು ,ಪರಿಷ್ಕೃತ ದರ ಜನವರಿ ಒಂದರಂದು ಜಾರಿಗೆ ಬರಲಿದೆ . ಹೊಸ ವರ್ಷದಲ್ಲಿ ಹೊಸ ಕಾರಿನ ದರ ಈ ಮೊದಲಿಗಿಂತ ದುಬಾರಿ ಆಗಲಿದೆ.
* ವಿಮೆ ಪರಿಷ್ಕೃತ ಮಾಹಿತಿ:
ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿಯಮಗಳನ್ನು ಸ್ಪಷ್ಟ ಗೊಳಿಸುವ ನಿಟ್ಟಿನಲ್ಲಿ ಗ್ರಾಹಕ ಮಾಹಿತಿ ಪಟ್ಟಿ ಪರಿಸ್ಕರಿಸಿದೆ. ಹೀಗಾಗಿ ಪಾಲಿಸಿದ್ದಾರದು ಜನವರಿ ಒಂದರಿಂದ ಹೊಸದಾಗಿ ವಿವರ ಸಲ್ಲಿಸಬೇಕಾಗುತ್ತದೆ.
* ಮಿಕ್ಕಿ ಮಿನಿ ಮೌಸ್ ಮುಕ್ತ ಬಳಕೆ :
ಡಿಸ್ನಿ ಕ್ಯಾರೆಕ್ಟರ್ ಗಳದ ಮಿಕ್ಕಿ ಅಂಡ್ ಮಿನಿ ಮೌಸ್ ನ ಕಾಪಿರೈಟ್ ಅವಧಿ ಡಿ.31 ಕೆ ಮುಗಿದಿದೆ. ಹೀಗಾಗಿ ವ್ಯಾಂಗ್ಯ ಚಿತ್ರಕಾರರು, ಲೇಖಕರು, ಮತ್ತು ಸಿನೆಮಾ ಕ್ಷೇತ್ರ ಮುಂತಾದವರು ಇದನ್ನು ಜ.1 ರಿಂದ ಮುಕ್ತವಾಗಿ ಬಳಸಬಹುದು.
* ಬ್ಯಾಂಕ್ ಲಾಕರ್ ಒಪ್ಪಂದ :
ಪರಿಷ್ಕೃತ ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಡಿ .31 ರ ಒಳಗೆ ಸಹಿ ಹಾಕದಿದ್ದರೆ ಅವರ ಲಾಕರ್ ಗಳು ಸ್ಥಗಿಗೊಳಿಸಲಾಗುವುದು, ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಸಿದೆ. ಹಾಗೆ ಮಾಡದೆ ಇದ್ದವರ ಲಾಕರ್ ಗಳು ಫ್ರೀಜ್ ಆಗಿರಲಿದೆ.
ಧನ್ಯವಾದ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ