ಕರ್ನಾಟಕದಂತೆ ತೆಲಂಗಾಣದಲ್ಲಿ 6 ಗ್ಯಾರಂಟಿ ಫಿಕ್ಸ್ !

ಎಲ್ಲರಿಗೂ ನಮಸ್ಕಾರ,

ತೆಲಂಗಾಣದ ನೂತನ ಸಿಎಂ ಆಗಿ ರೇವಂತ್ ರೆಡ್ಡಿ ಆಯ್ಕೆಯಾಗಿದ್ದಾರೆ. ಅವರು ಕರ್ನಾಟಕದಂತೆಯೇ, ತೆಲಂಗಾಣದಲ್ಲಿಯೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ 6 ಗ್ಯಾರಂಟಿಗಳನ್ನು ಅಯೋಜಿಸುವುದಾಗಿ ಭರವಸೆ ಕೊಟ್ಟಿದ್ದರು. ಅದರಂತೆಯೇ ಈಗ 6 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.

*ಮಹಾಲಕ್ಷ್ಮಿ ಯೋಜನೆ. ಉಚಿತ ಪ್ರಯಾಣ 

ತೆಲಂಗಾಣದಲ್ಲಿ ಮಹಾಲಕ್ಷ್ಮಿ ಯೋಜನೆ ಘೋಷಿಸಿದೆ. ಈ ಯೋಜನೆಯಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಗೆ 2500 ರೂಪಾಯಿ ನೀಡಲಾಗುವುದು.

* ಇದೀಗ ತೆಲಂಗಾಣದಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಆರ್​ಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಕಲ್ಪಿಸಲಾಗಿದೆ.

* 500 ರೂಗೆ ಗ್ಯಾಸ್ ಸಿಲಿಂಡರ್

ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿದರೆ 500ರೂಪಾಯಿಗೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು. ಪ್ರಸ್ತುತ ಮೋದಿ ಸರ್ಕಾರ 1000 ರೂಪಾಯಿಗೆ ಸಿಲಿಂಡರ್ ನೀಡುತ್ತಿದೆ. ಹಾಗಾಗಿ ಈ ಹೊರೆಯನ್ನ ತಗ್ಗಿಸಲು ಕಾಂಗ್ರೆಸ್ ಪಕ್ಷ 500 ರೂಪಾಯಿಗೆ ನೀಡುವುದಾಗಿ ಭರವಸೆ ನೀಡಿದೆ.

* ರೈತ ಭರೋಸಾ ಯೋಜನೆ

ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ರೈತ ಭರೋಸಾ ಯೋಜನೆಯನ್ನು ಘೋಷಿಸಿದ್ದಾರೆ. ರೈತ ಭರೋಸಾ ಯೋಜನೆಯಡಿ ಅನ್ನದಾತನಿಗೆ 15,000 ನೆರವು ನೀಡಲಾಗುವುದು. ಕೃಷಿ ಕಾರ್ಮಿಕರಿಗೆ 12 ಸಾವಿರ ನೀಡಲಾಗುವುದು. ಪ್ರತಿ ಕ್ವಿಂಟಾಲ್ ಭತ್ತಕ್ಕೆ 500 ರೂ ಬೋನಸ್ ಸಹ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

* ಗೃಹಜ್ಯೋತಿ

ಕರ್ನಾಟಕದಲ್ಲಿ ಗೃಹಜ್ಯೋತಿ ಯೋಜನೆಯಡಿ ನೀಡುತ್ತಿರುವ 200 ಯೂನಿಟ್ ಉಚಿತ ವಿದ್ಯುತ್​ ಯೋಜನೆಯನ್ನ ತೆಲಂಗಾಣಕ್ಕೂ ವಿಸ್ತರಿಸಿದೆ.

* ಹಿರಿಯ ನಾಗರಿಕರಿಗೆ ಪಿಂಚಣಿ

ಹಿರಿಯ ನಾಗರಿಕರಿಗೆ ಮಾಸಿಕ ವೃದ್ಧಾಪ್ಯ ವೇತನ 4000 ರೂಪಾಯಿ ನೀಡಲಾಗುವುದು. ರಾಜೀವ್ ಆರೋಗ್ಯ ಶ್ರೀ ಯೋಜನೆಯಲ್ಲಿ 10 ಲಕ್ಷ ಆರೋಗ್ಯ ವಿಮೆಯನ್ನು ಒದಗಿಸಲಾಗುವುದು.

ಮಹಾಲಕ್ಷ್ಮಿಯಿಂದ ಪ್ರಾರಂಭವಾಗುವ ಆರು ಗ್ಯಾರಂಟಿ ಯೋಜನೆಗಳನ್ನ ಘೋಷಿಸಿದ ನಂತರ ಮಾತನಾಡಿದ ಸೋನಿಯಾ ಗಾಂಧಿ , ತೆಲಂಗಾಣ ಜನರ ಆಶಯದಂತೆ ಆರು ಭರವಸೆಗಳನ್ನು ಈಡೇರಿಸಲಿದ್ದೇವೆ. ತೆಲಂಗಾಣ ರಾಜ್ಯ ಉದಯಕ್ಕೆ ಕಾರಣರಾದ ತಮ್ಮ ಪಕ್ಷಕ್ಕೆ ಜನ ಆಶೀರ್ವಾದ ಮಾಡಬೇಕೆಂದರು. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ತರುವುದು ನನ್ನ ಕನಸಾಗಿದೆ ಎಂದು ಸೋನಿಯಾ ಹೇಳಿದ್ದಾರೆ. ನೀವೆಲ್ಲರೂ ನನ್ನನ್ನು ಬೆಂಬಲಿಸಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

ಧನ್ಯವಾದಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಂಗಳೂರಿಗೆ ಕುಡಿಯುವ ನೀರಿನ ಬೇಗೆ?

ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು?!!

ಸದ್ಯದಲ್ಲಿ ಚಾಲಕರ ಹಿತ ಮೆಟ್ರೋ ರೈಲು ಆಗಮನ!