ಬೆಂಗಳೂರಿಗೆ ಕುಡಿಯುವ ನೀರಿನ ಬೇಗೆ?

ಎಲ್ಲರಿಗೂನಮಸ್ಕಾರಗಳು,

ಬೇಸಿಗೆಯಲ್ಲಿ ರಾಜಧಾನಿ ನೀರಿನ ಆಹಾಕಾರದ ಮುನ್ಸೂಚನೆ ದೊರೆತಿದೆ . ನೀರಿನ ವಿಚಾರದಲ್ಲಿ ಬೆಂಗಳೂರು ಅತ್ಯಂತ ದುರ್ಬಲ ನಗರ ಎನಿಸಿದ್ದು, ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ 92 ಅಡಿಗೆ ಕುಸಿಯುತ್ತಿದ್ದಂತೆ  ಇಲ್ಲಿ ನೀರಿನ ಆತಂಕ ಶುರುವಾಗಿದೆ. ಪರ್ಯಾಯ ಮೂಲಗಳತ್ತ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿದೆ. ಅಪಾರ್ಟ್ಮೆಂಟ್, ವಾಣಿಜ್ಯ ಸಂಸ್ಥೆಗಳು ಪ್ರತಿನಿತ್ಯ ಟ್ಯಾಂಕರ್ ಗಳಲ್ಲಿ ನೀರು ತರಿಸುತ್ತಿದ್ದು ನೀರಿನ ಅಗತ್ಯತೆ ಮತ್ತು ಲಭ್ಯತೆಯ ಕುರಿತು ಈ ವರದಿಗಳ ಮೂಲಕ ಮಾಹಿತಿ ವಿಶ್ಲೇಷಣೆ ನಡೆಸಲಿದೆ.
ಕೃಷ್ಣರಾಜಸಾಗರ ಅಣೆಕಟ್ಟೆ ನೀರಿನ ಮಟ್ಟ 92 ಅಡಿಗೆ ಕುಸಿಯುತ್ತಿದ್ದಂತೆ ಬೆಂಗಳೂರು ಜನತೆಗೆ ಕುಡಿಯುವ ನೀರಿನ ಆತಂಕ ಎದುರಾಗಿದೆ. ದಿನದಿಂದ ದಿನಕ್ಕೆ ವಿವಿಧ ಬಡಾವಣೆಗಳಲ್ಲಿ ಪೂರೈಕೆ ಆಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.
ಇದರಿಂದ ದೈನಂದಿನ ಬಳಕೆಗೆ ಬೋರ್ವೆಲ್ ಅಥವಾ ಅನ್ಯ ಜಲ ಮೂಲದ ಮೇಲೆ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದನ್ನರಿತ ಖಾಸಗಿ ಟ್ಯಾಂಕರ್ ಮಾಲೀಕರು ದುಪ್ಪಟ್ಟು ಹಣ ವಸೂಲು ಮಾಡುತ್ತಿರುವುದು ಬಡ ಜನರಿಗೆ ಹೊರೆಯಾಗಿ ಪರಿಣಮಿಸಿದೆ.
 ಕಾವೇರಿ ನೀರನ್ನು ಕುಡಿಯುವುದಕ್ಕಾಗಿ ಮಾತ್ರ ಬಳಸಬೇಕಿದೆ. ವಿದ್ಯುತ್ ಕಣ್ಣ ಮುಚ್ಚಾಲೆಯಿಂದಾಗಿ ನೀರಿನ ಪಂಪಿಂಗ್ ಪೂರೈಕೆ ಮೇಲು ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಂಗಳೂರಿನ ಜನಸಂಖ್ಯೆ ಕೋಟಿ ದಾಟಿದ್ದು, ನಿತ್ಯ 1400 ಎಂಎಲ್‌ಡಿ ನೀರಿನ ಅಗತ್ಯವಿದೆ . ಇದ್ದರನ್ವಯ ಮಾಸಿಕ 1.6 ಟಿಎಂಸಿ ನೀರು ಬೇಕಿದೆ . ಮುಂದಿನ ಜೂನ್ ನಂತರವೇ ಕೆ ಆರ್ ಎಸ್ ಗೆ ಹೆಚ್ಚಿನ ಅರಿವು ಬರುವುದರಿಂದ ಅಲ್ಲಿಯವರೆಗೂ ಒಂಬತ್ತು ಟಿಎಂಸಿ ನೀರು ಬೇಕಾಗುತ್ತದೆ. ಕೆ ಆರ್ ಎಸ್ ನಲ್ಲಿ ನೀರಿನ ಮಟ್ಟ ಇನ್ನಷ್ಟು ಕುಸಿದಲ್ಲಿ ಬೇಡಿಕೆ ಅಷ್ಟು ಪೂರೈಕೆ ಅಸಾಧ್ಯವಾಗಬಹುದು.
 ಪರ್ಯಾಯ ಮೂಲವಾಗಿ ಕೊಳವೆ ಬಾವಿಯನ್ನು ಆಶ್ರಯಿಸಿದರು, ಅಂತರ್ಜಲ ಕುಸಿತದಿಂದಾಗಿ ಅಗತ್ಯ ಪ್ರಮಾಣದ ನೀರು ಲಭ್ಯವಾಗುವ ಕಾತ್ರಿ ಇಲ್ಲ. ಈ ಕಾರಣದಿಂದಾಗಿ ಬೇಸಿಗೆ ದಿನಗಳಲ್ಲಿ ಜಲ ಸಮಸ್ಯೆ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇದು ಜಲಮಂಡಳಿಗೆ ಬಹು ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಇದರ ಹೊರತಾಗಿಯೂ ನಗರದ ಯಾವ ಭಾಗಕ್ಕೂ ಕೊರತೆ ಉಂಟಾಗದಂತೆ ಬೇಸಿಗೆ ವೇಳೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ, ಎಂದು ಜಲಮಂಡಳಿ ಅಧಿಕಾರಿಗಳು ಸಮಜಾಯಿಸಿ ನೀಡಿದ್ದಾರೆ.
110 ಹಳ್ಳಿಗಳಿಗೆ ಸಿಗುವುದೇ ಕಾವೇರಿ ನೀರು?
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆ ಹಲವು ವರ್ಷಗಳಿಂದ ಪ್ರಗತಿಯಲ್ಲಿದೆ. ತಾಂತ್ರಿಕ ಕಾರಣ ಜಲಮಂಡಳಿ ಅದನ್ನು ಮುಂದೂಡುತ್ತಲೇ ಬಂದಿದೆ. ಶೇಕಡ 90 ಕಾಮಗಾರಿ ಮುಕ್ತಾಯವಾಗಿದ್ದು ಮಾರ್ಚ್ ಅಂತ್ಯಕ್ಕೆ ಕಾವೇರಿ ಐದನೇ ಹಂತದ ಅಡಿಯಲ್ಲಿ ಪೂರೈಸುವ ನಿಗದಿಯಾಗಿರುವ ಗಡುವು ಮಿರದಿದ್ದರೆ ಸಾಕು.
ಟ್ಯಾಂಕರ್ ಮಾಫಿಯಾ ಮುನ್ನಡೆಗೆ
ನಗರದಲ್ಲಿ ಕುಡಿಯುವ ನೀರಿನ ಅಭಾವ ಎದುರಾದಗೆಲ್ಲ ಟ್ಯಾಂಕರ್ ಮಾಫಿಯಾ ತಲೆ ಎತ್ತುತ್ತದೆ. ಈ ಬಾರಿ ರಾಜಧಾನಿ ಪ್ರದೇಶವು ಬರದ ಪಟ್ಟಿಯಲ್ಲಿದೆ. ಹೀಗಾಗಿ ಬೇಡಿಕೆ ಎಷ್ಟು ನೀರು ಪೂರೈಕೆ ಆಗದ ಕಾರಣ ಜನರು ಟ್ಯಾಂಕರ್ ಮೊರೆ ಹೋಗಿದ್ದಾರೆ. ಅದರಲ್ಲೂ ಹೊರವಲಯದ ಬಹುತೇಕ ಕಡೆಗಳಲ್ಲಿ ಜನರು ಈಗಾಗಲೇ ಟ್ಯಾಂಕರ್ ಮೂಲಕ ನೀರು ಪಡೆಯುತ್ತಿದ್ದಾರೆ. ಹೋಟೆಲ್ ಹಾಗೂ ವಾಣಿಜ್ಯ ಮಳಿಗೆಯವರು ಕೂಡ ಟ್ಯಾಂಕರ್ ನೀರನ್ನೇ ಆಶ್ರಯಿಸಿದ್ದಾರೆ. ಜಲಮಂಡಳಿಯು ಬಡವರು ವಾಸಿಸುವ ಪ್ರದೇಶಕ್ಕೆ ಸೀಮಿತ ಸಂಖ್ಯೆಯಲ್ಲಿ ಟ್ಯಾಂಕರ್ ನೀರು ಪೂರೈಸುತ್ತಿದ್ದರು, ಅದು 'ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ' ಎಂಬಂತಾಗಿದೆ.
ಬರಿದಾದ ಕೊಳವೆ ಬಾವಿಗಳು?
ನಗರದಲ್ಲಿ ಈಗಾಗಲೇ ಅಂತರ್ಜಲ ಮಟ್ಟ ಕುಸಿತಿದೆ. ಕಳೆದ ನವೆಂಬರ್ ವೇಳೆಗೆ ಬಹುತೇಕ ಬೋರ್ವೆಲ್ಗಳು ಬತ್ತಿ ಹೋಗುವ ಸ್ಥಿತಿಗೆ ತಲುಪಿದ್ದವು. ಇದರಿಂದಾಗಿ ಕಾವೇರಿ ನೀರು ಸಂಪರ್ಕ ಪಡೆಯದವರು ಕೂಡ ಬೋರ್ವೆಲ್ ನೀರಿಲ್ಲದೆ ಪರಿತಪಿಸುವಂತಾಗಿದೆ ಕೊಳವೆ ಮಾರ್ಗ ಇದ್ದರೂ ವಿವಿಧ ಕಾರಣದಿಂದಾಗಿ ಹಲವು ಬಡಾವಣೆಗಳಲ್ಲಿ ನೀರು ಪಡೆಯಲು ಜನರು ಪರದಾಡುವಂತಾಗಿದೆ.
ರಾಜಧಾನಿಯ ಎಲ್ಲೆಲ್ಲಿ ಅಭಾವ?
ಯಲಹಂಕದ ಅನಂತಪುರ, ದೊಡ್ಡ ಬೆಟ್ಟ ಹಳ್ಳಿ, ಚಿಕ್ಕ ಬೆಟ್ಟ ಹಳ್ಳಿ, ಗೋವಿಂದಪುರ, ದಾಸರಹಳ್ಳಿ, ಮಹದೇವಪುರ ವಲಯದ ಚನ್ನಸಂದ್ರ ಕಾಡಬೇಸನಹಳ್ಳಿ, ಉಳಿಮಾವು , ಆರ್ ಆರ್ ನಗರ ವಲಯದ ಉಳ್ಳಾಳು, ವಸಂತಪುರ, ಹೆಮ್ಮಿಗೆಪುರ, ಹೊಸಹಳ್ಳಿ, ದಾಸರಹಳ್ಳಿ ವಲಯದ ಚಿಕ್ಕಸಂದ್ರ, ಅಬ್ಬಿಕೆರೆ, ಹೊಸಹಳ್ಳಿ, ಸೇರಿ ವಿವಿಧ ಭಾಗಗಳಲ್ಲಿ ನೀರಿನ ಭಾವ ಕಂಡುಬರುವ ಸಾಧ್ಯತೆ ಇದೆ.
ನೋಡುದ್ರಲ್ಲ ಸ್ನೇಹಿತರೆ ನೀರಿಗಾಗಿ ಎಷ್ಟು ತೊಂದರೆ ಆಗುತ್ತಿದೆ. ಅದಕ್ಕಾಗಿ ಮಿತವಾಗಿ ನೀರನ್ನು ಬಳಸಿ ಎಲ್ಲ ಜನರಿಗೂ ಉಪಯೋಗವಾಗಲಿ ಎಂದು ಹೇಳುತ್ತಾ ಧನ್ಯವಾದಗಳನ್ನು ತಿಳಿಸುತ್ತೇನೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚೀನಾದಲ್ಲಿ ಶುರು ಆಯ್ತು ಹೊಸ ತಳಿ ನ್ಯೂಮೋನಿಯಾ ಆತಂಕ

ಕಂಡಲ್ಲೆಲ್ಲ ಕಲ್ಲಂಗಡಿ ದರ್ಬಾರ್!

ಕೆಪಿಸಿಎಲ್ ಉದ್ಯೋಗಾಂಕ್ಷಿಗಳಿಗೆ ನಿರಾಸೆ!?