ಚೀನಾದಲ್ಲಿ ಶುರು ಆಯ್ತು ಹೊಸ ತಳಿ ನ್ಯೂಮೋನಿಯಾ ಆತಂಕ
ಎಲ್ಲರಿಗೂ ನಮಸ್ಕಾರ,
ಕೋವಿಡ್ ಸೋಂಕಿನ ನಂತರ ಚೀನಾದಲ್ಲಿ ಈಗ ಮತ್ತೊಂದು ಸೋಂಕು ಶುರುವಾಗಿದೆ ನ್ಯೂಮೋನಿಯಾ, ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬಂದಿದ್ದು ಎಲ್ಲರಲ್ಲಿ ಆತಂಕ ಉಂಟು ಮಾಡಿದೆ. ಈ ಸೋಂಕಿಗೆ ಮಕ್ಕಳೆ ಟಾರ್ಗೆಟ್, ಇದು ವೈರಲ್ ಇನ್ಫೆಕ್ಷನ್ ಆಗಿತ್ತು, ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತಿದೆ. ಚೀನಾ ಮತ್ತು ಅಮೆರಿಕ ದೇಶಕ್ಕೆ ಬಂದ ನಂತರ ನಮ್ಮ ಭಾರತಕ್ಕೂ ಕಾಲಿಟ್ಟಿದೆ. ಈ ಸೋಂಕು ನಮ್ಮ ರಾಜಧಾನಿ ಬೆಂಗಳೂರಿನಲ್ಲೂ ಕಳೆದ ಒಂದು ವಾರದಿಂದ ಕಂಡು ಬಂದಿದೆ. ನಮ್ಮ ರಾಜಧಾನಿಯಲ್ಲಿ ಶೇಕಡ 25ಕ್ಕೂ ಹೆಚ್ಚು ಸೋಂಕು ದೃಢಪಟ್ಟಿದೆ. 15 ವರ್ಷದ ಒಳಗಿನ ಮಕ್ಕಳಲ್ಲಿ ಹೆಚ್ಚು ಈ ಸೋಂಕು ದೃಢಪಟ್ಟಿದ್ದು, ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಪೋಷಕರು ಹುಷಾರಾಗಿ ಇರಬೇಕೆಂದು ಕೇಳಿಕೊಳ್ಳುತ್ತೇವೆ.
ನ್ಯೂಮೋನಿಯಾ ಸೋಂಕಿನ ರೋಗಲಕ್ಷಣಗಳು ;
* ಜ್ವರ
* ನೆಗಡಿ ಮತ್ತು ಕೆಮ್ಮು
* ಮೈಕೈ ನೋವು
* ಸುಸ್ತು
* ಉಸಿರಾಟದ ತೊಂದರೆ
ಇದನ್ನು ತಡೆಯಲು ಪೋಷಕರು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ಪೋಷಕರು ಮಕ್ಕಳ ಕಡೆ ಹೆಚ್ಚು ಗಮನ ಹರಿಸಬೇಕು ಮತ್ತು ಮಕ್ಕಳಿಗೆ ಶೀತವಾಗದಂತೆ ನೋಡಿಕೊಳ್ಳಬೇಕು. ಮಕ್ಕಳನ್ನು ಯಾವಾಗಲೂ ಶುಚಿಯಾಗಿಡಬೇಕು.
ಧನ್ಯವಾದಗಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ