ಪೋಸ್ಟ್‌ಗಳು

ಡಿಸೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶೂನ್ಯ ಇಂಗಾಲಕ್ಕಾಗಿ ಒಮ್ಮತ........,

ಎಲ್ಲರಿಗೂ ನಮಸ್ಕಾರಗಳು ಹವಮಾನ ಬದಲಾವಣೆಯಿಂದಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತವೆ. ಇದಕ್ಕೆ ಇಂಗಾಲದಿಯಿಂದಾಗುತ್ತಿರುವ ಮಾಲಿನ್ಯ ನೇರ ಕಾರಣವಾಗಿದೆ. ಪ್ಯಾರಿಸ್  ಶೃಂಗದಳಾಗಿರುವ ಒಪ್ಪಂದವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ವಾಗ್ದಾನವನ್ನು ಮುಂದುವರಿದ ದೇಶಗಳು ನೀಡಿವೆ. ಭಾರತ ಕೂಡ 2050 ಕ್ಕೆ ಶೇಕಡಾ 50 ಹಾಗೂ 2020ರ ವೇಳೆ  ಶೂನ್ಯ ಇಂಗಾಲ ಘೋಷಣೆಯನ್ನು ಸಾಕಾರಗೊಳಿಸುವ ಲಕ್ಷ್ಯ ಹರಿಸಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದೆ. ಯು ಏ ಈ ಯಲ್ಲಿ ಎಮ್ಮಿ ರೇಟ್ ವಿಮಾನಯಾನ ಸಂಸ್ಥೆ ಮುಖ ಚಹರೆ ಆದರಿಸಿ ಪ್ರಯಾಣಿಕರಿಗೆ ಬೋರ್ಡಿಂಗ್ ಗೆ ಅವಕಾಶ ನೀಡುವ ಸೌಲಭ್ಯವನ್ನು ನವೆಂಬರ್ ನಿಂದ ಪರಿಚಯಿಸಿದೆ. ಇದಕ್ಕಾಗಿ ಎಐ ತಂತ್ರಜ್ಞಾನವನ್ನು ಬಳಸಲಾಗಿದೆ. ಹೆಚ್ಚು ಸಮಯ ತಪಾಸನೆ ಸ್ಥಳದಲ್ಲಿ ನಿಲ್ಲುವ ಪ್ರಮೇಯ ಇರದು, ಪ್ರಯಾಣಿಕ ನೊಬ್ಬ ನಡೆದುಕೊಂಡು ಬರುತ್ತಿದ್ದಂತೆ ಆತನ ಮುಖ ಚಹರೆ ಸೆರೆಹಿಡಿದು, ಮಾಹಿತಿ ಹೆಚ್ಚಿನ ಪ್ರವೇಶಿಸಲು ಅವಕಾಶ ಮಾಡಿಕೊಡಲಿದೆ.  ಬಡವರಿಗೆ ಅಕ್ಕಿ ವಿತರಣೆ ದೇಶದಲ್ಲಿ ಆಹಾರ ಭದ್ರತೆ ಅಡಿಯಲ್ಲಿ ಬಡವರಿಗೆ ವಿತರಿಸಲಾಗುತ್ತಿರುವ ಉಚಿತ ಅಕ್ಕಿಯನ್ನು ಇನ್ನು ಐದು ವರ್ಷ ಮುಂದುವರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಬಿಪಿಎಲ್ ,ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ವ್ಯಕ್ತಿಗಳಿಗೆ ತಲ ಐದು ಕೆಜಿ ಅಕ್ಕಿ ನೀಡಲಾಗುತ್ತಿದೆ.ಇದರಿಂದ 81.35 ಕೋಟಿ ಜನರಿಗೆ ಅನುಕೂಲವಾಗಲಿದೆ ಕೃಷಿ ಬೆಳೆದು ಆದಾಯ ವೃ

ಬಾಹ್ಯಾಕಾಶದಲ್ಲಿ ಮಿನುಗಿದ ಭಾರತ!!!.........

ಎಲ್ಲರಿಗೂ ನಮಸ್ಕಾರಗಳು, ಹಲವು ರಂಗಗಳಲ್ಲಿ ಜಾಗತಿಕವಾಗಿ ಗಮನ ಸೆಳೆದಿರುವ ಭಾರತ ಕೃಷಿ ಮತ್ತು ವಿಜ್ಞಾನ ತಂತ್ರಜ್ಞಾನದಲ್ಲೂ ಈ ವರ್ಷ ಹಲವು ಮೈಲಿಗಲ್ಲುಗಳನ್ನು ದಾಖಲಿಸಿದ್ದು ವಿಶೇಷ. ಕರೋನ ಸೃಷ್ಟಿಸಿದ್ದ ಹಿನ್ನಡೆಯನ್ನು ನಿವಾರಿಸಿಕೊಂಡು ಮುಂದೆ ಇಟ್ಟಿದ್ದಲ್ಲದೆ ಹೊಸ ವಿಕ್ರಮಗಳನ್ನು ಸಾಕಾರಗೊಳಿಸಿದ್ದು ಹೆಮ್ಮೆಯ ಸಂಗತಿ. ಭಾರತ ಚಂದ್ರಯಾನದಲ್ಲಿ ಸಾಧಿಸಿದ ಯಶಸ್ಸನ್ನು ಜಗತ್ತಿನ ಬಹುತೇಕ ದೇಶಗಳು ಕೊಂಡಾಡಿದವು. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊಟ್ಟಮೊದಲ ಬಾರಿಗೆ ನೌಕೆಯನ್ನು ಇಳಿಸಿದ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿತು. ಆಗಸ್ಟ್ 23 ರಂದು ಈ ಐತಿಹಾಸಿಕ ಸಾಧನೆ ಮೂಲಕ ಭಾರತ ಗಣ್ಯ ರಾಷ್ಟ್ರಗಳ ಪಟ್ಟಿಗೆ ಸೇರಿತು. ಕಡಿಮೆ ವೆಚ್ಚದಲ್ಲಿ ಹಿರಿಯ ದಾದ ವಿಕ್ರಮ ಸಾಧಿಸಿದ ಇಸ್ರೋ ಸಂಸ್ಥೆಯನ್ನು ವಿಶ್ವದ ಮುಂದುವರೆದ ರಾಷ್ಟ್ರಗಳು ಮುಕ್ತ ಕಂಠದಿಂದಾಗಿಸಿದವು. ಈ ಮಹಾತ್ ಸಾಧನೆ ಬೆನ್ನಲ್ಲೇ ಸೆಪ್ಟೆಂಬರ್ 2 ರಂದು ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್ -1   ಉಪಗ್ರಹ ಉಡಾವಣೆ ಯಶಸ್ವಿಯಾಯಿತು.  ಈ ಸಾಧನೆಯ ನೇತೃತ್ವ ವಹಿಸಿರುವ ಇಸ್ರೋ ಅಧ್ಯಕ್ಷ ಡಾ.ಎಸ್. ಸೋಮನಾಥ್ ಅವರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಮುಖ ಬೆಳವಣಿಗೆಗಳು * ಏಪ್ರಿಲ್ ನಲ್ಲಿ ಸ್ಪೇಸ್ ಎಕ್ಸ್ ಸ್ಟಾರ್ ಶಿಪ್ ಯೋಜನೆ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ವಿಫಲವಾಯಿತು.  * ಏಪ್ರಿಲ್ ನಲ್ಲಿ ನಾಸಾ ಹಾಗೂ ಕೆನಡಿಯನ್ ಸ್ಪೇಸ

ಭಾರತ ದೇಶದಲ್ಲಿ ಜನಿಸಿದ ನಾವೆಲ್ಲರೂ ಹೆಮ್ಮೆಪಡುವ ವಿಷಯ!!!!!!!..... ಜಾಗತಿಕ ಮಟ್ಟಕ್ಕೆ ಭಾರತದ ಕರೆನ್ಸಿ????

ಎಲ್ಲರಿಗೂ ನಮಸ್ಕಾರಗಳು, ನಿಜವಾಗ್ಲೂ ಭಾರತ ದೇಶದಲ್ಲಿ ಜನಿಸಿದ ನಾವೆಲ್ಲರೂ ಹೆಮ್ಮೆ ಪಡಲೇಬೇಕು ಏಕೆಂದರೆ ಮೊಟ್ಟಮೊದಲ ಬಾರಿಗೆ ನಮ್ಮ ಭಾರತದ ಕರೆನ್ಸಿ ಜಾಗತಿಕ ಮಟ್ಟದಲ್ಲಿ ಹೆಸರಾಗಿದೆ. ತೈಲ ಖರೀದಿಗೆ ರೂಪಾಯಿಯಲ್ಲಿ ಪಾವತಿ!!!!! ನಮ್ಮ ದೇಶದ ಕರೆನ್ಸಿ ಮೊದಲ ಬಾರಿಗೆ ಸಾಧನೆಯನ್ನು ಉಂಟು ಮಾಡಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಕರೆನ್ಸಿ ಮೌಲ್ಯ ಹೆಚ್ಚಿದೆ. ಅದೇನೆಂದರೆ, ಅರಬ್ ಸಂಯುಕ್ತ ಸಂಸ್ಥಾನದಿಂದ ಕಚ್ಚಾತೈಲ ಖರೀದಿಗೆ ಭಾರತ ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯದಲ್ಲಿ ಪಾವತಿ ಮಾಡಿದ್ದು, ದೇಶದ ಕರೆನ್ಸಿಯನ್ನು ಜಾಗತಿಕ ಮಟ್ಟಕ್ಕೆ ಒಯ್ಯುವನಿಟ್ಟಿನಲ್ಲಿ ಇದೊಂದು ದೊಡ್ಡ ಮುನ್ನಡೆಯಾಗಿದೆ.  ಟೈಲಕ್ಕಾಗಿ ಆಮದಿನ ಮೇಲೆ ಶೇಕಡ 85ರಷ್ಟು ಅವಲಂಬಿಸಿರುವ ಭಾರತ, ಡಾಲರ್ ಬದಲು ರೂಪಾಯಿಯಲ್ಲೇ ವ್ಯವಹಾರವನ್ನು ಇತ್ಯರ್ಥ ಪಡಿಸುವ ಮೂಲಕ ವಹಿವಾಟು ವೆಚ್ಚವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಜಗತ್ತಿನ ಮೂರನೇ ಅತಿ ದೊಡ್ಡ ಇಂಧನ ಬಳಕೆದಾರ ದೇಶವಾದ ಭಾರತ, ಪ್ರಥಮ ಬಾರಿಗೆ ತೈಲ ಸಮೃದ್ಧ ಯುಎಇ ಇಂದ ರುಪಾಯಿ ಮೌಲ್ಯದಲ್ಲಿ ಕಚ್ಚಾತ ಇಲ್ಲ ಖರೀದಿಸಿದ್ದು ಸ್ಥಳೀಯ ಕರೆನ್ಸಿಯನ್ನು ಜಾಗತಿಕ ವ್ಯವಹಾರದಲ್ಲಿ ಬಳಸುವ ಗುರಿ ಸಾಧನೆಗೆ ನೆರವಾಗಿದೆ. ಈ ಹಿನ್ನೆಲೆಯಲ್ಲಿ ಇತರ ತೈಲ ಸರಬರಾಜುದಾರರ ಜೊತೆ ಕೂಡ ಇಂಥದ್ದೇ ವ್ಯವಹಾರ ಕುದಿರಿಸಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಕರೆನ್ಸಿಯ ಅಂತರಾಷ್ಟ್ರೀಕರಣ ಒಂದು ಪ್ರಕ್ರಿಯೆಯಾಗಿದ್ದು ಅದಕ್ಕೆ ನಿರ

7.5 ಸಾವಿರ ಶಿಕ್ಷಕರ ಬರ್ತಿಗೆ ಪ್ರಸ್ತಾವನೆ!!

ಎಲ್ಲರಿಗೂ ನಮಸ್ಕಾರ,  ಸರ್ಕಾರಿ ಶಾಲೆಗಳಿಗೆ ಅಗತ್ಯವಾದಷ್ಟು ಶಿಕ್ಷಕರನ್ನು ಭರ್ತಿ ಮಾಡುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗುತ್ತಿರುವ ಬೆನ್ನಲ್ಲೇ ಈ ಶೈಕ್ಷಣಿಕ ವರ್ಷದಲ್ಲಿ 4985 ಶಿಕ್ಷಕರು ನಿವೃತ್ತರಾಗಿದ್ದಾರೆ. ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಆಸಕ್ತಿ ತೋರಿಸಿದೆ. ಈ ಇಂದಿನ ಸರ್ಕಾರದ ಅವಧಿಯಲ್ಲಿ 2022 ರಿಂದ 23 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾಲಿ ಇದ್ದ ಹದಿನೈದು ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅಧಿ ಸೂಚನೆ ಹೊರಡಿಸಲಾಗಿತ್ತು. ಆ ಪೈಕಿ 13352 ಅರ್ಹ ಅಭ್ಯರ್ಥಿಗಳು ಆಯ್ಕೆಯಾಗಿದ್ದು ನ್ಯಾಯಾಲಯದ ಪ್ರಕರಣಗಳನ್ನು ಹೊರತುಪಡಿಸಿ ಒಟ್ಟು 12415 ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗಿದೆ.  ಅಷ್ಟರ ನಡುವೆಯೇ ಮುಂದಿನ ಶೈಕ್ಷಣಿಕ ಅವಧಿಗೆ ಹೊಸದಾಗಿ 5,000 ಶಿಕ್ಷಕರ ಕೊರತೆ ಎದುರಾಗಲಿದೆ. 2023 ನೇ ಸಾಲಿನಲ್ಲಿ ನಿವೃತ್ತಿಯಿಂದ ತೆರವಾಗುವ 4985 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆ ಕೋರಿರುವ ಪ್ರಸ್ತಾವನೆಯೂ ಆರ್ಥಿಕ ಇಲಾಖೆ ಪರಿಶೀಲನೆ ಎಲ್ಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆಂಗ್ಲ ಭಾಷೆ ಹಾಗೂ ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬೇಕಾಗಿದೆ. ಆದರೆ ನಿರೀಕ್ಷೆ ಎಷ್ಟು ಶಿಕ್ಷಕರ ಲಭ್ಯತೆ ಇಲ್ಲವಾಗಿದೆ. ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ 2127 ಆಂಗ್ಲ , 6934 ವಿಜ್ಞಾನ ಶಿಕ್ಷಕರ ಕೊರತೆ ಇದೆ. ಇದಲ್ಲ

ನ್ಯೂ ಇಯರ್ ಸೆಲೆಬ್ರೇಶನ್ ಗು ಬಿತ್ತು, ಕೋವಿಡ್ ರೂಲ್ಸ್!!???

ಎಲ್ಲರಿಗೂ ನಮಸ್ಕಾರಗಳು, ಕೋವಿ ಸಮಸ್ಯೆಯು ನಮ್ಮ ದೇಶದಲ್ಲಿ ಮರಣಾಂತಿಕ ರೋಗವಾಗಿ ಜನರಲ್ಲಿ ಹರಡುತ್ತಿದೆ. ಕಳೆದ ಮೂರು ವರ್ಷಗಳಿಂದ ಇಡೀ ದೇಶವು ಕೋವಿಡ ಎಂಬ ಜ್ವಾಲೆಯಲ್ಲಿ ಸುಟ್ಟು ಹೋಗುತ್ತಿದೆ. ನಾವು ಎಷ್ಟೇ ಪ್ರಯತ್ನದಿಂದ ಮುಕ್ತರಾಗಲು ಸಾಧ್ಯವೇ ಆಗುತ್ತಿಲ್ಲ.  ಈ ಕೊರೊನ ವೈರಸ್ ಎಲ್ಲ ಜನ ಜೀವನಗಳ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ. ಈ ವೈರಸ್ ಇಂದ ಲಾಕ್ ಡೌನ್ ಎಂಬುದು ಒಂದು ಜನರು ವ್ಯಾಪಾರಗಳಲ್ಲಿ ಅಸ್ತವ್ಯಸ್ತರಾಗುತ್ತಾರೆ. ಒಂದು ಹೊತ್ತಿಗೂ ಸಹ ತುಂಬಾ ಬಡಸ್ತಿಯಲ್ಲಿ ಹೋಗುತ್ತಿದ್ದಾರೆ.  ಕೋವಿಡ್ ಮೊದಲು ಚೀನಾ ದೇಶದಲ್ಲಿ ಪ್ರಾರಂಭವಾಗಿ ನಂತರ ನಮ್ಮ ದೇಶಕ್ಕೂ ಕಾಲಿಟ್ಟು ಸುಮಾರು ಜನರ ಪ್ರಾಣವನ್ನು ತೆಗೆದುಕೊಂಡಿದೆ. ಎಷ್ಟೋ ಜನರ ಹೊಟ್ಟೆ ಮೇಲೆ ಹೊಡೆದಿದೆ. ಈ ವೈರಸ್ ನಮ್ಮ ದೇಶಕ್ಕೆ ಕಾಲಿಟ್ಟ ನಂತರ ನಮ್ಮ ದೇಶದಲ್ಲಿ ಜನರ ಮನಸ್ಥಿತಿ ಅಲ್ಲೋಲಕಲ್ಲೋಲವಾಗುತ್ತಿದೆ. ಕರೋನ ವೈರಸ್ ಮೊದಲನೇ ಅಂತ ಎರಡನೇ ಹಂತ ಎಂದು ಬಂದಿದ್ದು ಈಗ ಮೂರನೇ ಹಂತವು ಕೂಡ ಸ್ಟಾರ್ಟ್ ಆಗಿದೆ ಎಂದು ಹೇಳಲಾಗುತ್ತಿದೆ. ವಯಸ್ಸಾದವರಿಂದ ಹಿಡಿದು ಎಳೆ ಕೂಸುಗಳವರೆಗೂ ತುಂಬಾ ಜಾಗೃತರಾಗಿ ಇದ್ದರೂ ಈ ಕೋವಿಡ್ ನಮ್ಮನ್ನು ಬಿಡುತ್ತಿಲ್ಲ.  ಕೆಲಸವನ್ನೇ ನಂಬಿ ಜೀವನ ನಡೆಸುತ್ತಿರುವವರು ಸುಮಾರು ಜನ ಕೆಲಸವನ್ನು ಬಿಟ್ಟು ಮನೆಯಲ್ಲೇ ಕುಳಿತು ತಮ್ಮ ಒಂದು ಒತ್ತು ಊಟಕ್ಕೂ ಸಹ ತುಂಬಾ ಕಷ್ಟದಿಂದ ಇದ್ದಾರೆ. ಇದನ್ನು ಯಾರಿಗೂ ಹೇಳಲಾಗದೆ ಬಿಡಲಾಗದೆ ತಮ್ಮ ನೋವನ್ನು ತಾವೇ ಅನುಭವಿಸಿಕೊಳ್

ಸಿಲಿಂಡರ್ ಅಂಗಡಿಗೆ ನುಗ್ಗಿದ ಅಧಿಕಾರಿಗಳು ಸಿಲೆಂಡರ್ ಒಳಗಿರುವುದನ್ನು ನೋಡಿ ಬೆಚ್ಚಿ ಗಾಬರಿಯಾಗುತ್ತಾರೆ.!!!!

ಎಲ್ಲರಿಗೂ ನಮಸ್ಕಾರ ಎಲ್ಪಿಜಿ ಗ್ಯಾಸ್ ಸಿಲೆಂಡರ್ ನನ್ನು ಏನಕ್ಕೆ ಉಪಯೋಗಿಸುತ್ತಾರೆ ಎಂದರೆ ಅಡುಗೆ ಮಾಡಲು ಮತ್ತು ವೆಹಿಕಲ್ ಗೆ ಉಪಯೋಗಿಸುತ್ತಾರೆ. ಆದರೆ ಭಾರತ ದೇಶದ ಮಾಯನಗರಿ ಮುಂಬೈನಲ್ಲಿ lPG ಗ್ಯಾಸ್ ಸಿಲೆಂಡರ್ ಅನ್ನು ಯಾವದಕ್ಕೆ ಬಳಸಿದ್ದಾರೆ ಗೊತ್ತಾ? ಆದರೆ ನೀವು ಶಾಕ್ ಆಗೋದು ಖಂಡಿತ. ಅಬ್ಬಬ್ಬ ನಮ್ಮ ದೇಶದಲ್ಲಿ ದೊಡ್ಡ ಮಾಡೋದಿಕ್ಕೆ ಯಾವ ಅಂತ ಬೇಕಾದರೂ ಹೇಳಿದ್ದಾರೆ ಎಂದು ಈ ಸಿಲಿಂಡರೇ ಉದಾರಣೆ. ಮುಂಬೈ ನಗರ ಮಾಯನಗರ ಯಾಕೆ ಕರೀತಾರೆ ಅಂತ ಅಂದರೆ ಮಾನವನಿಗೂ ಊಹಿಸದ ಘಟನೆಗಳು ಇಲ್ಲಿ ನಡೆಯುತ್ತೆ. ಎಲ್ಲರೂ ಹೇಳೋದು ಮುಂಬೈ ನಗರ ಒಂದು ಸಮುದ್ರ ಇದ್ದಂಗೆ ಅಂತ ಆದರೆ ಮುಂಬೈನಲ್ಲಿ ಸಮುದ್ರವಲ್ಲ ಒಂದು ದೊಡ್ಡ ಸಾಗರ. ಈ ಸಾಗರದಲ್ಲಿ ಧುಮುಕಿ ಬದುಕಬೇಕು ಎಂದರೆ ರಕ್ತ ಸುರಿಸಬೇಕು ಇಲ್ಲ ಎಂದರೆ ದೊಡ್ಡ ದೊಡ್ಡ ತಿಮಿಂಗಗಳು ನುಂಗಿಬಿಡುತ್ತವೆ. ಮುಂಬೈ ನಗರದಲ್ಲಿ ಇರುವ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಏರಿಯಾ ಎಂದರೆ ಅಂದೇರಿ ನಗರ. ಸಾಕಷ್ಟು ಸಿನಿಮಾ ಚಿತ್ರೀಕರಣಗಳು ಈ ಅಂದೇರಿ ಏರಿಯಾದಲ್ಲಿ ನಡೆಯುತ್ತೆ. ಇಲ್ಲಿ ನಡೆದ ಸಿಲಿಂಡರ್ ಘಟನೆ ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ. ಸ್ನೇಹಿತರೆ ಇಲ್ಲಿ ನಡೆದ ಘಟನೆ ನೀವು ಹಿಂದೆಲ್ಲ ನೋಡಿಲ್ಲ ಮುಂದೆಲ್ಲೂ ನೋಡೋದು ಇಲ್ಲ ಎಂದುಕೊಳ್ಳುತ್ತೇನೆ. ಅಂದೇರಿ ನಗರದಲ್ಲಿರುವ ಬಿಷಪ್ ಸಿಲಿಂಡರ್ ಅಂಗಡಿ ಅಂದೇರಿ ನಗರದಲ್ಲಿರುವ ಸುಮಾರ್ 88% ಮನೆಗಳಿಗೆ ಇವರೇ ಸಿಲೆಂಡರ್ ರವಾನೆ ಮಾಡೋದು. ಗಾಡಿಗಳಿಗೆ ಸಿಲಿಂಡರ್ ಗ

Money Management: ಏನು ಮಾಡಿದರೂ ಹಣಕಾಸು ಸಂಕಷ್ಟ ಕಳೆಯುತ್ತಿಲ್ಲವಾ? ಈ ಟಿಪ್ಸ್ ಅನುಸರಿಸಿ

ಎಲ್ಲರಿಗೂ ನಮಸ್ಕಾರ, ಹಣಕಾಸು ಸಂಕಷ್ಟದಿಂದ ಹೊರಬರುವ ಮಾರ್ಗಗಳೇನು ಎಂಬುದು ತಿಳಿದಿರಲಿ. ಖರ್ಚುಗಳು ನಿಮ್ಮ ಹತೋಟಿಯಲ್ಲಿರಲಿ ಅಗತ್ಯ ಇದ್ದರೆ ಖರ್ಚು ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಿ .ಅನಗತ್ಯವಾಗಿ ಖರ್ಚು ಮಾಡಬೇಡಿ. ಸಾಲ ಇದ್ದರೆ ಅದನ್ನು ತೀರಿಸುವುದಕ್ಕೆ ಮೊದಲ ಆದ್ಯತೆ ಇರಲಿ. ಯಾವತ್ತು ಸಾಲದ ಸುಳಿಗೆ ಸಿಲುಕ ತೀರುವ ಸಂಕಲ್ಪ ಮಾಡಿ. ದುಡ್ಡಿಗೆ ಹೆಚ್ಚು ಕಿಮ್ಮತ್ತು ಕೊಡಲ್ಲ ಎಂದು ನಾವು ಹೇಳಿದರೂ ಹಣ ಯಾವತ್ತೂ ಮುಖ್ಯವೇ. ಹಣ ಸಂಪಾದನೆ ಚೆನ್ನಾಗಿದ್ದಾಗ ಮತ್ತು ಖರ್ಚು ವೆಚ್ಚಗಳು ಇತಿಮಿತಿಯಲ್ಲಿ ಇರುವಾಗ ನಮಗೆ ಹಣ ಎಷ್ಟು ಮೌಲ್ಯದ್ದು (Value of money) ಎಂಬುದು ಅರಿವಿಗೆ ಬರುವುದಿಲ್ಲ. ಒಮ್ಮೆ ಕಷ್ಟಗಳು ಬರತೊಡಗಿದಾಗಲೇ ಗೊತ್ತಾಗುವುದು ದುಡ್ಡಿನ ಬೆಲೆ. ಹತ್ತಾರು ವರ್ಷ ದುಡಿದರೂ ಬ್ಯಾಂಕ್ ಖಾತೆಯಲ್ಲಿ 10,000 ರೂ ಕೂಡ ಬ್ಯಾಲನ್ಸ್ ಹೊಂದಿಲ್ಲದಿರುವವರ ಸಂಖ್ಯೆ ಬಹಳ ಹೆಚ್ಚಿದೆ. ಬಹಳಷ್ಟು ಜನರು ಸಾಲಗಳ ಸುಳಿಗೆ ಸಿಕ್ಕು ಗಿರಕಿ ಹೊಡೆಯುತ್ತಿರುತ್ತಾರೆ. ಹಣ ನನ್ನ ಕೈಲಿ ನಿಲ್ಲೋದಿಲ್ಲ ಎಂದು ಪರಿತಪಿಸುತ್ತಿರುತ್ತಾರೆ. ಅವರ ಈ ಸಂಕಷ್ಟಕ್ಕೆ ಕಾರಣ ಏನು? ಕೈತಪ್ಪಿದ ಕರ್ಚು - ಬಹಳ ಜನರು ತಮ್ಮ ಖರ್ಚಿನ ಮೇಲೆ ಕಣ್ಣಿಟ್ಟಿರುವುದಿಲ್ಲ. ಏನೂ ಖರ್ಚು ಮಾಡಿಲ್ಲ ಅಂತ ಅನಿಸಿದರೂ ಸಾಕಷ್ಟು ವೆಚ್ಚ ಮಾಡಿರುತ್ತಾರೆ. ಅಪರೂಪಕ್ಕೆ ನೋಡುವ ವಿವಿಧ ವಾಹಿನಿಗಳು, ಒಟಿಟಿಗಳಿಗೆ ಸಬ್​ಸ್ಕ್ರೈಬ್ ಆಗಿರುತ್ತಾರೆ. ಅನಗತ್ಯವಾಗಿ ಮೊಬೈಲ್ ನಂಬರ್​ಗಳನ್ನು ಇಟ್ಟುಕೊಂ

IPL 2024 Auction: ಮಿನಿ ಹರಾಜಿನಲ್ಲಿ ಈ ಆರು ಆಟಗಾರರ ಮೇಲೆ ಹಣದ ಮಳೆಯಾಗುವುದು ಗ್ಯಾರಂಟಿ

ಎಲ್ಲರಿಗೂ ನಮಸ್ಕಾರ ನಾಳಿನ ಹರಾಜಿನಲ್ಲಿ 77 ಆಟಗಾರರು ಕದಿದ್ದಿದಾರರನ್ನು ಪಡೆಯಲಿದ್ದಾರೆ. ಅರಾಜಿಗೂ ಮೊದಲು ಈ ಹರಜಿನಲ್ಲಿ ಯಾವ ಆಟಗಾರರು ಹೆಚ್ಚಿನ ಬೆಲೆಗೆ ಮಾರಾಟವಾಗಬಹುದು ಎಂಬುದು ಎಲ್ಲರ ಕುತೂಹಲವಾಗಿದೆ.  IPL 2023 Auction ಕಿರು ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ಮಧ್ಯಾಹ್ನ 1 ಗಂಟೆಯಿಂದ ಆರಂಭವಾಗಲಿದೆ. 333 ಆಟಗಾರರ ಭವಿಷ್ಯ ನಿರ್ಧಾರಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ವಾಸ್ತವವಾಗಿ ಮಿನಿ ಹರಾಜಿಗೆ ಬರೋಬ್ಬರಿ 1100 ಕ್ಕೂ ಹೆಚ್ಚು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ ಅವರಲ್ಲಿ 333 ಆಟಗಾರರನ್ನು ಶಾರ್ಟ್​ ಲಿಸ್ಟ್ ಮಾಡಲಾಗಿದೆ. ಅದಾಗ್ಯೂ ಹರಾಜಿಗೆ ಅರ್ಹತೆ ಪಡೆದಿರುವ ಈ 333 ಆಟಗಾರರೂ ಖರೀದಿದಾರರನ್ನು ಪಡೆಯುವುದಿಲ್ಲ. ಏಕೆಂದರೆ ಎಲ್ಲಾ 10 ತಂಡಗಳಿಂದ ಕೇವಲ 77 ಸ್ಲಾಟ್​ಗಳು ಮಾತ್ರ ಖಾಲಿ ಉಳಿದಿವೆ. ಹೀಗಾಗಿ ನಾಳಿನ ಹರಾಜಿನಲ್ಲಿ 77 ಆಟಗಾರರು ಖರೀದಿದಾರರನ್ನು ಪಡೆಯಲ್ಲಿದ್ದಾರೆ. ಏತನ್ಮಧ್ಯೆ, ಹರಾಜಿಗೂ ಮೊದಲು, ಈ ಹರಾಜಿನಲ್ಲಿ ಯಾವ ಆಟಗಾರ ಹೆಚ್ಚಿನ ಬೆಲೆಗೆ ಮಾರಾಟವಾಗಬಹುದು ಎಂಬುದು ಎಲ್ಲರ ಕುತೂಹಲವಾಗಿದೆ. ಅದಕ್ಕೆ ಉತ್ತರ ಇಲ್ಲಿದೆ. ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಸುಮಾರು ಎಂಟು ವರ್ಷಗಳ ನಂತರ ಈ ವರ್ಷ ಐಪಿಎಲ್‌ಗೆ ಬರುತ್ತಿದ್ದಾರೆ. ಇವರ ಹೆಸರು ಶಾರ್ಟ್‌ಲಿಸ್ಟ್ ಆಗುವಾಗ ಹತ್ತರಲ್ಲಿ 5 ತಂಡಗಳು ಅವರೊಂದಿಗೆ ಮಾತನಾಡಿ ತಮ್ಮ ತಂಡ ಸೇರುವ ಇಚ್ಛೆ

ಪಂಪ ಸರೋವರಕ್ಕೆ ಬರುವ ಪ್ರವಾಸಿಗರ ಎಚ್ಚರ!

ಎಲ್ಲರಿಗೂ ನಮಸ್ಕಾರ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿವೆ. ಅಂಜನಾದ್ರಿ ಬೆಟ್ಟ, ಪಂಪ ಸರೋವರಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹನುಮ ಹುಟ್ಟಿದ ಸ್ಥಳ ಅಂಜನಾದ್ರಿ ಮತ್ತು ರಾಮನಿಗಾಗಿ ಕಾದಿದ್ದ ಶಬರಿಯ ಗುಹೆಯ ಸಮೀಪ ಪಂಪ ಸರೋವರವಿದೆ. ಹೀಗಾಗಿ ದೇಶದ ವಿವಿಧ ಭಾಗಗಳಿಂದ ಪ್ರತಿನಿತ್ಯ ಪ್ರವಾಸಿಗರು ಬರುತ್ತಾರೆ. ಆದರೆ ಪಂಪ ಸರೋವರಕ್ಕೆ ಬರುವ ಭಕ್ತರ ಜೀವಕ್ಕೆ ಗ್ಯಾರಂಟಿ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಪಂಪಾ ಸರೋವರ ಪುರಾಣ ಪ್ರಸಿದ್ಧಿಯನ್ನು ಹೊಂದಿದೆ. ದೇಶದಲ್ಲಿ ಐದು ಪುಣ್ಯ ಸರೋವರಗಳಿದ್ದು ಅದರಲ್ಲಿ ಪಂಪ ಸರೋವರ ಕೂಡ ಒಂದು. ಪಂಪ ಸರೋವರದಲ್ಲಿ ಸ್ನಾನ ಮಾಡಿದರೆ ಪುಣ್ಯ ಬರುತ್ತದೆ ಅನ್ನೋ ನಂಬಿಕೆ ಇದೆ. ಇದೇ ಕಾರಣಕ್ಕೆ ಹೆಚ್ಚಿನ ಭಕ್ತರು ಪ್ರವಾಸಿಗರು ಬರುತ್ತಾರೆ. ಆದ್ರೆ ಮುಜರಾಯಿ ಇಲಾಖೆ ಸಿಬ್ಬಂದಿ ನಿರ್ಲಕ್ಷ ಮತ್ತು ಜಸ್ಕಾಂ ಸಿಬ್ಬಂದಿ ನಿರ್ಲಕ್ಷದಿಂದಾಗಿ ಭಕ್ತರ ಜೀವಕ್ಕೆ ಅಪಾಯ ಎದುರಾಗಿದೆ. ಈ ಬಗ್ಗೆ ಸಾರ್ವಜನಿಕರು ಇಲಾಖೆ ಅಧಿಕಾರಿಗಳಿಗೆ ಮತ್ತು ಜಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಪ್ರತಿನಿತ್ಯ ಅನೇಕರು ಬಂದು ಇದೇ ವಿದ್ಯುತ್ ವೈರ್ ಗಳನ್ನು ತುಳಿದುಕೊಂಡೆ ಅಡ್ಡಾಡುತ್ತಿದ್ದಾರೆ. ವಯರ್ ಕಟ್ ಆಗಿರುವ ಕಡೆ ಕಾಲಿಟ್ಟರೆ ಜೀವ ಹೋಗುತ್ತೆ ಎಂದು ಸ್ಥಳೀಯ ನಿವಾಸಿ ಆತಂಕ ಹೋರಾ ಹಾಕಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಗಂಗಾವತಿ

ಏ ನೀವು ಬಣ್ಣದ ಗ್ಯಾಸ್ ಕ್ಯಾನಿಸ್ಟರ್ ಗಳು??

ಎಲ್ಲರಿಗೂ ನಮಸ್ಕಾರ, ಹೊಗೆ ಡಬ್ಬಗಳು ಅಥವಾ ಹೊಗೆ ಬಾಮಗಳ ಬಳಕೆಗೆ ಬಹುತೇಕ ದೇಶಗಳಲ್ಲಿ ಕಾನೂನು ಬದ್ಧವಾಗಿದ್ದು, ಎಲ್ಲಾ ಚಿಲ್ಲರೆ ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ. ಅಗತ್ಯಕ್ಕೆ ತಕ್ಕಂತೆ ಅವುಗಳನ್ನು ಬಳಸಲಾಗುತ್ತದೆ. ಈ ಕ್ಯಾನ್ಗಳನ್ನು ಮಿಲಿಟರಿ ಸಿಬ್ಬಂದಿ ಮತ್ತು ಕ್ರೀಡಾ ಕ್ರಮಗಳಲ್ಲಿ ಅಥವಾ ಫೋಟೋಶೂಟ್ ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಹೊಗೆ ಡಬ್ಬಿಗಳಿಂದ ಹೊರ ಸೂಸುವ ದಪ್ಪ ಹೊಗೆಯಿಂದ ರೂಪುಗೊಂಡ ಈ ಗ್ಯಾಸ್ ಮಿಲಿಟರಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯ ಚರಣಗಳಲ್ಲಿ ಬಳಸಲಾಗುತ್ತದೆ. ದಟ್ಟವಾದ ಹೋಗೆ ಎದುರಾಳಿಯ ಚಲನೆಯನ್ನು ಅಸ್ಪಷ್ಟಗೊಳಿಸುತ್ತವೆ. ಶತ್ರುಗಳ ಕಣ್ಣುಗಳಿಗೆ ಮುಂದೇನಿದೆ ಎನ್ನುವುದು ಕಾಣುವುದಿಲ್ಲ. ಮಿಲಿಟರಿ ಕಾರ್ಯಾಚರಣೆ ವೇಳೆ ಇವು ಅಗತ್ಯ ರಕ್ಷಣೆ ಒದಗಿಸುತ್ತವೆ. ಕ್ರೀಡೆಗಳಲ್ಲಿ ವಿಶೇಷವಾಗಿ ಫುಟ್ಬಾಲ್ ನಲ್ಲಿ ಹೊಗೆ ಡಬ್ಬಿಗಳನ್ನು ಅಭಿಮಾನಿಗಳು ತಮ್ಮ ಕ್ಲಬ್ ಗಳ ಬಣ್ಣಗಳನ್ನು ಪ್ರದರ್ಶಿಸಲು ಬಳಸುತ್ತಾರೆ.  ಧನ್ಯವಾದಗಳು,

ಕನ್ನಡ ಶಾಲೆಗಳ ಉಳಿವಿಗೆ ನ್ಯಾಯಾಂಗ ಹೋರಾಟ;

ಎಲ್ಲರಿಗೂ ನಮಸ್ಕಾರ, ಸರ್ಕಾರಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯು ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಮಾರಕವಾಗಿದ್ದು ಇದಕ್ಕೆ ಪರಿಹಾರ ಪಡೆಯಲು ನ್ಯಾಯಾಂಗದ ಮೊರೆ ಹೋಗಬೇಕಿದೆ. ಜೊತೆಗೆ ಕನ್ನಡ ಭಾಷೆಯ ಬೆಳವಣಿಗೆಗಾಗಿ ಜನಂದೋಲನ ರೂಪಿಸುವ ಅಗತ್ಯವಿದೆ ಎಂದು ವಿವಿಧ ಕ್ಷೇತ್ರಗಳ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಬುಧವಾರ ಹಮ್ಮಿಕೊಂಡಿದ್ದ 'ಕನ್ನಡ ಶಾಲೆ ಉಳಿಸಿ ಕನ್ನಡ ಬೆಳೆಸಿ' ಚಿಂತನ ಸಭೆಯಲ್ಲಿ ಸಾಹಿತ್ಯ, ಶಿಕ್ಷಣ, ನ್ಯಾಯಾಂಗ, ಆಡಳಿತ ಸೇರಿ ವಿವಿಧ ಕ್ಷೇತ್ರಗಳ ಹಾಗೂ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಈ ವೇಳೆ ಜಿಲ್ಲೆ ಬಂದು ಮಾದರಿ ಕನ್ನಡ ಶಾಲೆ ಸ್ಥಾಪನೆ, ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವುದು, ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ, ಶಿಕ್ಷಕರಿಗೆ ಉತ್ತಮ ತರಬೇತಿ, ಕನ್ನಡ ದೊಂದಿಗೆ ಇಂಗ್ಲಿಷ್ ಬೋಧನೆ, ಬಜೆಟ್ ನಲ್ಲಿ ಶಿಕ್ಷಣಕ್ಕಾಗಿ ಪ್ರತ್ಯೇಕ ಅನುದಾನ ಘೋಷಣೆ ಸೇರಿ ಹಲವು ಸಲಹೆಗಳನ್ನು ನೀಡಿದರು. ಅಗತ್ಯಕ್ಕೆ ತಕ್ಕ ಶಿಕ್ಷಕರ ನೇಮಕ ಮಾಡಬೇಕು. ಇದಕ್ಕಾಗಿ ನ್ಯಾಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಹಾಗೂ ಈ ವಿಚಾರವಾಗಿ ಸೂಕ್ತ ನಿರ್ಣಯ ಕೈಗೊಳ್ಳಲು ತಜ್ಞರ ಸಮಿತಿ ರಚಿಸಲು ತೀರ್ಮಾನಿಸಲಾಯಿತು. ಧನ್ಯವಾದಗಳು,

ಚಳಿಗಾಲದಲ್ಲೂ ಇಳಿಯದ ಎಳನೀರ ಬೆಲೆ!!?

ಎಲ್ಲರಿಗೂ ನಮಸ್ಕಾರಗಳು, ಬಹುತೇಕ ಸ್ಥಳಗಳಲ್ಲಿ 40 ಕೆಳಗಡೆ 50 ರೂಗೆ ಮಾರಾಟ ಮಧ್ಯವರ್ತಿಗಳಿಗೆ ಹೆಚ್ಚಿನ ಲಾಭ. ಆರೋಗ್ಯಕ್ಕೆ ಉತ್ತಮ ಪಾನೀಯ ಎಂಬ ಕಾರಣಕ್ಕೆ ಬಹುತೇಕ ಮಂದಿ ಎಳನೀರು ಮೊರೆ ಹೋಗುತ್ತಾರೆ. ಬೇಸಿಗೆಯಲ್ಲಿ ಯಥೇಚ್ಛವಾಗಿ ಮಾರಾಟವಾಗುವ ಎಳನೀರು ಚಳಿಗಾಲದಲ್ಲಿ ಅಷ್ಟಾಗಿ ವಿಲೇವಾರಿ ಆಗದು ಹೀಗಾಗಿ ದರದಲ್ಲಿ ಅರ್ಧದಷ್ಟು ಇಳಿಕೆ ಆಗುವುದುಂಟು. ಆದರೆ ಈ ಬಾರಿ ಎಳನೀರು ಬೆಲೆ ದುಬಾರಿಯಾಗಿಯೇ ಮುಂದುವರೆದಿದೆ. ಬರ ಆವರಿಸಿರುವುದು ಹಾಗೂ ತೆಂಗು ಬೆಳೆ ಇಳುವಳಿಯಲ್ಲಿನ ಇಳಿಕೆಯ ನೇರ ಪರಿಣಾಮ ಎಳನೀರ ಮೇಲು ಆಗಿದೆ ಎನ್ನಲಾಗುತ್ತಿದೆ. ಹಾಗಾಗಿ ದೂರದ ಊರುಗಳಿಂದ ಎಳನೀರು ಖರೀದಿಸಿ ತಂದು ನಗರದಲ್ಲಿ ಮಾರಾಟ ಮಾಡಲು ಹೆಚ್ಚು ಹಣ ಭಯವಾಗುತ್ತಿದೆ ಎಂಬುದು ವ್ಯಾಪಾರಸ್ಥರ ಅನಿಸಿಕೆ. ಸಾಮಾನ್ಯವಾಗಿ ಮಂಡ್ಯ ಮೈಸೂರ್ ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳ ವಿವಿಧ ಭಾಗಗಳಿಂದ ಎಳನೀರು ಆಮದಾಗುತ್ತದೆ. ಪ್ರಸ್ತುತ ಒಂದು ಎಳನೀರ ಬೆಲೆ ರೂ. 40 ಇದೆ ಕೆಲವೆಡೆ 45 ರೂಗಳಿಗೂ ಮಾರಾಟ ಮಾಡಲಾಗುತ್ತಿದೆ ಕಳೆದ ವರ್ಷ ಇದೆ ಅವಧಿಯಲ್ಲಿ 35 ಇತ್ತು. ಬೆಳೆಗಾರರ ಕೈಗೆ ಮಾತ್ರ ಸ್ವಲ್ಪ ಹಣ ಸಿಗುತ್ತಿದೆ ವ್ಯಾಪಾರಿಗಳಿಗೂ ಅಷ್ಟಾಗಿ ಲಾಭ ಸಿಗುತ್ತಿಲ್ಲ ಬಹುತೇಕ ದುಡ್ಡು ಮಧ್ಯವರ್ತಿಗಳ ಪಾಲಾಗುತ್ತಿದೆ ಎಂಬುದು ತಿಳಿದಿದೆ. ಧನ್ಯವಾದಗಳು.

ತಲೆಯಲ್ಲಿ ಹೊಕ್ಕಿದ ಹುಳು!!!

ಅಮೆಜಾನ್ ಅರಣ್ಯಕ್ಕೆ ಹೋಗಿದ್ದಾಗ 26 ವರ್ಷದ ಯುವತಿಯ ತಲೆ ಹೊಕ್ಕಿದ ಬಾಟ್ ಫ್ಲ್ವ ಲಾರ್ವ ವನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ರಾಜಧಾನಿಯ ಖಾಸಗಿ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದೆ. ಯುವತಿಯು ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ತಲೆಯಲ್ಲಿ ಹೂತ ಸಮಸ್ಯೆಗೆ ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ಆಗಮಿಸಿದ್ದರು. ಈ ಕುರಿತು ವೈದ್ಯರು ಸೂಕ್ಷ್ಮವಾಗಿ ಪರೀಕ್ಷೆ ನಡೆಸಿದಾಗ ರೋಗಿಯು ಮಯಾಸಿಸ್ ತೊಂದರೆಯಿಂದ ಬಳಲುತ್ತಿದ್ದುದನ್ನು ತಿಳಿದು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ತಲೆಯ ಚರ್ಮದ ಒಳಗಿದ್ದ ಹುಳುವನ್ನು ಹೊರ ತೆಗೆದಿದ್ದಾರೆ. ಈ ಚಿಕಿತ್ಸೆಯಿಂದ ರೋಗಿಗೆ ಯಾವುದೇ ಸಂಕೀರ್ಣ ತೊಂದರೆಗಳು ಆಗಿಲ್ಲ ಸೂಕ್ಷ್ಮ ರೀತಿಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ ಉಳುವನ್ನು ಹೊರತೆಗೆಯಲಾಗಿದ್ದು ರೋಗಿ ಸಂಪೂರ್ಣ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಸಲಹಾ ತಜ್ಞ ಡಾಕ್ಟರ್ ರಾಘವೇಂದ್ರ ಕಲಾದಗಿ ಹೇಳಿದ್ದಾರೆ. ಅಮೆರಿಕದ ಪರಿಸರ ಸಂಬಂಧಿತ ಪ್ರವಾಸಿ ತಾಣಗಳು ಅಮೆಜಾನ್ ಕಾಡುಗಳಂತ ಸ್ಥಳಗಳಿಗೆ ಪ್ರಯಾಣ ಬೆಳೆಸುವವರು ಈ ತೊಂದರೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಭಾರತದಲ್ಲಿ ಇವು ಕಾಣಿಸುವುದಿಲ್ಲ ಎಂದು ಡಾಕ್ಟರ್ ನಿಮಾ ಡಯಾಸ್ ತಿಳಿಸಿದ್ದಾರೆ.

1೦೦ ದಿನ ಪೂರೈಸಿದ ಕಾವೇರಿ ಹೋರಾಟ!!

ತಮಿಳ್ ನಾಡಿಗೆ ಕಾವೇರಿ ನೀರು ಹರಿಸುವಂತೆ ನಿರಂತರವಾಗಿ ವೈಜ್ಞಾನಿಕ ಆದೇಶ ನೀಡುತ್ತಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಗರದಲ್ಲಿ ನಡೆಸುತ್ತಿರುವ ನಿರ್ದಿಷ್ಟಾವಧಿ ಧರಣಿ ಬುಧವಾರ ನೂರು ದಿನ ಪೂರೈಸಿತು. ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕಪ್ಪು ಬಾವುಟ ಪ್ರದರ್ಶಿಸಿ ರಾಜ್ಯ ಸರ್ಕಾರದ ನಿರ್ಲಕ್ಷದ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ನಡುವೆ ಜಲವಿವಾದ ಉಂಟಾದಾಗ ಎರಡು ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲು ಮುಂದಾಗದ ಪ್ರಧಾನಿ ನರೇಂದ್ರ ಮೋದಿ ಸಂಕಷ್ಟ ಸನ್ನಿವೇಶದಲ್ಲೂ ಹಠಮಾರಿತನ ತೋರಿಸುತ್ತಿದ್ದಾರೆ. ಜೊತೆಗೆ ರಾಷ್ಟ್ರೀಯ ಜಲನೀತಿ ರೂಪಿಸದೆ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿ ಕಾರಿದ್ದಾರೆ.

ಹೋಮಿಯೋಕೇರ್ ವಾರ್ಷಿಕೋತ್ಸವ ಕೊಡುಗೆ..&!! 6 ತಿಂಗಳು ಉಚಿತ ಚಿಕಿತ್ಸೆ.

ಹೋಮಿಯೋಕೇರ್ ವಿಶೇಷ ವಾರ್ಷಿಕೋತ್ಸವ ಕೊಡುಗೆಯನ್ನು ಪ್ರಾರಂಭಿಸಿದೆ. ಇದರಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರಲ್ಲಿ ಒಬ್ಬರು ಆರು ತಿಂಗಳವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದು. ಅವರ ತಜ್ಞರ ತಂಡದೊಂದಿಗೆ ರೋಗಿಗಳು ಮಧುಮೇಹ, ಸ್ಟ್ಯಾಂಡಿ ಲೈಟ್ ಇಸ್,  ಪೈಲ್ಸ್, ಅಸ್ತಮಾ, ಕೀಲು ನೋವು ಮತ್ತು ಇತರ ಕಾಯಿಲೆಗಳಿಗೆ ವಿಶ್ವ ದರ್ಜೆಯ ಚಿಕಿತ್ಸೆ ಪಡೆಯಬಹುದು. ಹೋಮಿಯೋಕೇರ್ ಹೇಳಿರುವ ವಾಟ್ಸಪ್ ನಂಬರ್ ಗೆ 9೦3೦೦೦6538 ಹಾಯ್ ಎಂದು ಮೆಸೇಜ್ ಕಳಿಸುವ ಮೂಲಕ ಉಚಿತ ಸಮಾಲೋಚನೆ ಪಡೆಯಬಹುದು.

ಕೊನೆಗೂ ಯುವನಿಧಿ ಯೋಜನೆಗೆ ಮುಹೂರ್ತ ಫಿಕ್ಸ್!!!!

ಎಲ್ಲರಿಗೂ ನಮಸ್ಕಾರ, ನಮ್ಮ ಕರ್ನಾಟಕ ದಲ್ಲಿ ಕಾಂಗ್ರೆಸ್ ಸರ್ಕಾರದಿಂದ ( ಸಿಎಂ ಸಿದ್ದರಮಯ್ಯ) 5 ಗ್ಯಾರಂಟಿ ಯನ್ನು ಗೋಶಿಸಲಾಗಿತ್ತು. ಅದರಲ್ಲಿ 4 ಗ್ಯಾರಂಟಿ ಗಳು ಚಾಲ್ತಿಯ್ಲಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಯುವನಿಧಿ ಯೋಜನೆಯನ್ನು ಇನ್ನೂ ಜಾರಿಗೆ ತಂದಿರಲಿಲ್ಲ. ನೆನ್ನೆ ಸಿಎಂ ಸಿದ್ದರಾಮಯ್ಯ ರವರು ನಿರುದ್ಯೋಗ  ಭತ್ಯೆಯ ಬಗ್ಗೆ ಮಾತನಾಡಿದ್ದಾರೆ. ಡಿಸೆಂಬರ್ 21 ರಿಂದ ಅರ್ಜಿ ಸಲ್ಲಿಸಲು ದಿನಾಂಕವನ್ನು ನಿಗದಿಪಡಿಸಿದ್ದು, ಜನವರಿ ತಿಂಗಳ ಮೊದಲನೇ ಇಲ್ಲ 2ನೇ ವಾರದಿಂದ ನಿರುದ್ಯೋಗ ಭತ್ಯೆಯ ಹಣ ಬ್ಯಾಂಕ್ಗೆ ವರ್ಗಾವಣೆಯಾಗುವುದಾಗಿ ಹೇಳಿದ್ದಾರೆ. ನಿರುದ್ಯೋಗಿ ಭತ್ಯೆಯಲ್ಲಿ 2೦22 ಮತ್ತು 2೦23 ರಲ್ಲಿ ಪಾಸ್ ಆಗಿರುವ ಪದವಿದರ ವಿದ್ಯಾರ್ಥಿಗಳಿಗೆ ರೂ. 3೦೦೦ ಹಾಗೂ ಡಿಪ್ಲಾಮೋ ಪದವಿದರ ವಿದ್ಯಾರ್ಥಿಗಳಿಗೆ ರೂ. 15೦೦ ಕೊಡುವುದಾಗಿ ಭರವಸೆ ನೀಡಿದರು. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಧನ್ಯವಾದಗಳು.

ಪೆಟ್ರೋಲ್, ಡೀಸೆಲ್ ಬೆಲೆ ಸದ್ಯದಲ್ಲೇ ಇಳಿಕೆ ಸಾಧ್ಯತೆ; ಚುನಾವಣೆಯೊಂದೇ ಕಾರಣವಲ್ಲ; ಮತ್ತಿನ್ನೇನು ಕಾರಣ?

ಎಲ್ಲರಿಗೂ ನಮಸ್ಕಾರ, ಭಾರತದಲ್ಲಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಕಡಿಮೆ ಆಗದೆ ಇರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸದ್ಯದಲ್ಲೇ ಇಳಿಕೆ ಆಗಬಹುದು ಎನ್ನಲಾಗುತ್ತಿದೆ. ನಷ್ಟದಲ್ಲಿದ್ದ ಮಾರುಕಟ್ಟೆ ಕಂಪನಿಗಳು ಈ ವರ್ಷ ಲಾಭದ ಹಳಿಗೆ ಬಂದಿರುವ ಹಿನ್ನೆಲೆಯಲ್ಲಿ ಬೆಲೆ ಕಡಿಮೆ ಮಾಡುವ ಸಾಧ್ಯತೆ ಇದೆ. 2022 ರಲ್ಲಿ ಒಂದು ಲೀಟರ್ ಪೆಟ್ರೋಲ್ ಮಾರಾಟದಿಂದ ತೈಲ ಕಂಪನಿಗಳಿಗೆ 17 ರೂ ನಷ್ಟ ಆಗಿತ್ತು, ಈ ವರ್ಷ 10 ರೂ ಲಾಭ ಮಾಡಿವೆ.  ಕಳೆದ ಒಂದು ವರ್ಷದಿಂದ ಅಧಿಕ ಕಾಲದಿಂದ ಪೆಟ್ರೋಲ್ ಬೆಲೆಯಲ್ಲಿ ವ್ಯತ್ಯಯವೇ ಆಗಿಲ್ಲ. ಸತತವಾಗಿ ಬೆಲೆ ಯಥಾಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಈಗ ಪೆಟ್ರೋಲ್ ಬೆಲೆ ಇಳಿಯುತ್ತದೆ ಎನ್ನುವ ಸುದ್ದಿ ಗಮನಾರ್ಹ ಎನಿಸಿದೆ. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಗೆ ಮುಂದಾಗಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಆದರೂ ಕೂಡ ಪೆಟ್ರೋಲ್ ಬೆಲೆ ಇಳಿಕೆಗೆ ಜಾಗತಿಕ ಕಚ್ಚಾ ತೈಲ ಬೆಲೆಗಳೂ ಒಂದು ಕಾರಣವಾಗಿವೆ. ಕಚ್ಛಾ ತೈಲ ಬಹಳ ತಿಂಗಳಿಂದ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳಿಗೆ ಕಡಿಮೆ ಬೆಲೆಗೆ ಸರಬರಾಜು ಆಗುತ್ತಿದೆ. ಈಗ ಇನ್ನಷ್ಟು ಕಡಿಮೆ ಬೆಲೆಗೆ ತೈಲ ಸರಬರಾಜು ಆಗುತ್ತಿದೆ. ಬಹಳ ವರ್ಷಗಳ ಬಳಿಕ ಒಎಂಸಿಗಳು, ಅಂದರೆ ಇಂಡಿಯನ್ ಆಯಿಲ್​ನಂತಹ ತೈಲ ಮಾರುಕಟ್ಟೆ ಸಂಸ್ಥೆಗಳು ಲಾಭದ ಹಳಿಗೆ ಬಂದಿವೆ. 2022ರಲ್ಲಿ ಒಎಂಸಿಗಳು ಒಂದು ಲೀಟರ್ ಪೆಟ್ರೋಲ್​ ಮ

ಅಂಗಡಿಗೆ ಸೋಡಾ ಕುಡಿಯಲು ಹೋಗಿ ಏಕಾ ಏಕಿ ಶ್ರೀಮಂತೆಯಾದ ಮಹಿಳೆ!!!!!!?

ಎಲ್ಲರಿಗೂ ನಮಸ್ಕಾರ, ಈ ಮಹಿಳೆ ಅಮೆರಿಕದ ವರ್ಜೀನಿಯಾ ನಿವಾಸಿ, ಆಕೆ ಸೋಡಾ ಕುಡಿಯಲು ಹೋಗಿ ಶ್ರೀಮಂತೆಯಾಗಿ ಹಿಂದುರುಗಿದ್ದಾಳೆ. ಮಹಿಳೆ ಹೆಸರು ಜಾನೆಟ್ ಬೈನ್ , ಸೋಡಾ ಕುಡಿಯಲು ಹೋಗಿದ್ದವಳು ಅಲ್ಲೇ ಕಂಡ ಲಾಟರಿ ಟಿಕೆಟ್ ಖರೀದಿಸಿದಳು. ತನ್ನ ಟಿಕೆಟ್‌ನಲ್ಲಿ 100,000 ಡಾಲರ್ ಅಂದರೆ 83 ಲಕ್ಷ ರೂಪಾಯಿ ಬಹುಮಾನ ಬಂದಿದೆ ಎಂದು ತಿಳಿದ ತಕ್ಷಣ ಮಹಿಳೆ ಆಘಾತಕ್ಕೊಳಗಾಗಿದ್ದಾರೆ. ಟಿಕೆಟ್ ಸಂಖ್ಯೆಯನ್ನು ನೋಡಿದ ನಂತರ ಅವಳು ಆಶ್ಚರ್ಯಚಕಿತರಾದರು. ಬಳಿಕ ತುಂಬಾ ಸಂತೋಷಪಟ್ಟಿದ್ದಾರೆ. ಅದೃಷ್ಟ ಅಂದರೆ ಇದೆ ನೋಡಿ, ಯಾರ ಜೀವನ ಯಾವಾಗ ಯಾವ ತಿರುವು ಪಡೆಯುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಕೆಲವರು ಎಲ್ಲವನ್ನು ಕಳೆದುಕೊಂಡು ಕಳೆದುಕೊಂಡು ಬಡವರು ಆಗಬಹುದು, ಇನ್ನೂ ಕೆಲವರು ಎಲ್ಲವನ್ನು ಪಡೆದು ಶ್ರೀಮಂತರು ಆಗಬಹುದು. ಈ ಮಹಿಳೆ ಅಂಗಡಿಯ ಅಂಗಡಿಗೆ ಸೋಡಾ ಕುಡಿಯಲು ಹೋಗಿ 84 ಲಕ್ಷ ರು ಗೆದ್ದು ಹಿಂತಿರುಗಿದ್ದಾಳೆ. ಧನ್ಯವಾದಗಳು.

lichi fruits benefits of skin...., !!ಲಿಚ್ಚಿ ಹಣ್ಣಿನಲ್ಲಿದೆ ನಿಮ್ಮ ಚರ್ಮದ ಆರೋಗ್ಯ!!

ಎಲ್ಲರಿಗೂ ನಮಸ್ಕಾರ, ನಿಮ್ಮ ಹಣ್ಣಿನ ಬುಟ್ಟಿಯಲ್ಲಿ ಮಾವಿನಹಣ್ಣು, ಕಲ್ಲಂಗಡಿಗಳು ಜಾಗ ಮಾಡಿಕೊಂಡಿವೆ. ಈಗ ಲಿಚ್ಚಿ ಹಣ್ಣಿನ ಸರದಿ. ಹೌದು, ಲಿಚ್ಚಿ ಅಥವಾ ಲಿಚಿ ಮೃದುವಾದ, ಬಿಳಿ ತಿರುಳಿನ ಹಣ್ಣಾಗಿದ್ದು, ಇದನ್ನು ಉಷ್ಣವಲಯ ಮತ್ತು ಉಪ-ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಬೇಸಿಗೆ ಕಾಲದಲ್ಲಿ ಬಹಳ ಕಡಿಮೆ ಅವಧಿಯವರೆಗೆ ಲಭ್ಯವಿದೆ. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಸುಲಭವಾಗಿ ರಕ್ತ ಪರಿಚಲನೆಯಾಗಲು ಸಹಾಯ ಮಾಡುವ ಈ ರಸಭರಿತ ಮತ್ತು ರುಚಿಕರವಾದ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸೂರ್ಯನ ಕಿರಣಗಳಿಂದ ನಿಮ್ಮ ಚರ್ಮ ಕಪ್ಪಾಗುವಿಕೆ, ಅಕಾಲಿಕ ವಯಸ್ಸಾದ ಹಾಗೂ ದೀರ್ಘಾವಧಿಯಲ್ಲಿ ಚರ್ಮದ ಕ್ಯಾನ್ಸರ್ ಗೆ ಕಾರಣವಾಗಬಹುದು, ಆದರೆ ಲಿಚ್ಚಿ ಹಣ್ಣಿನ ಸಾರವು ಸೂರ್ಯನಿಂದ ಬರುವ ಯುವಿ ವಿಕಿರಣದ ಹಾನಿಕಾರಕ ಪರಿಣಾಮದಿಂದ ಚರ್ಮವನ್ನು ರಕ್ಷಿಸುತ್ತದೆ. ಲಿಚ್ಚಿ ಹಣ್ಣಿನ ಸಾರದಲ್ಲಿರುವ ಪಾಲಿ ಪಿನಾಲ್ಗಳು ಚರ್ಮ ಕಪ್ಪಾಗುವಿಕೆಯನ್ನು ತಡೆಯುತ್ತದೆ. ಇದು ಚರ್ಮದ ಕಲೆಗಳನ್ನು ಅಳಿಸುತ್ತದೆ.  ಲಿಚ್ಚಿ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಿಂದ ಕೂಡಿರುವ ರುಚಿಕರವಾದ ಲಿಚ್ಚಿ ಹಣ್ಣಿನಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ನ್ಯೂಟ್ರಿಷನಿಸ್ಟ್ ಪ್ರಕಾರ, ಲಿಚ್ಚಿ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿದೆ, ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಮತ್ತು ನಿಮ್

ಏಕಾಏಕಿಯಾಗಿ ಮೊಬೈಲ್ ಟವರ್ ಕೆಳಗೆ ಬಿದ್ದಿದೆ?

ಎಲ್ಲರಿಗೂ ನಮಸ್ಕಾರ, ಲಗ್ಗೆರೆಯ ಪಾರ್ವತಿ ನಗರದಲ್ಲಿ ಮೊಬೈಲ್ ಟವರ್ ಕುಸಿದು ನೆಲಕ್ಕೆ ಉರುಳಿದೆ. ಅದು ಹಳೆಯ ಟವರ್ ಆದ್ದರಿಂದ ಜನರು ಅದು ಬೀಳುವ ಸಾಧ್ಯತೆ ಇದೆ ಎಂದು ಭಾವಿಸಿ ಎಚ್ಚೆತ್ತುಕೊಂಡಿದ್ದಾರೆ ಆದಕಾರಣ ಅಪಾಯದಿಂದ ಪಾರಾಗಿದ್ದಾರೆ. ಇದು ಮೊಬೈಲ್ ಟವರ್ ಆಗಿದ್ದು ಬಿದ್ದ ರಬಸಕ್ಕೆ ಅಕ್ಕಪಕ್ಕದ ಬಿಲ್ಡಿಂಗ್ ಗಳು ಕುಸಿದಿದೆ.  ಕಾಮಗಾರಿಯವರ ಮೇಲೆ ಅಲ್ಲಿನ ಸ್ಥಳಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲಿ ಪಕ್ಕದಲ್ಲಿ ಕಸ ಜೆಸಿಬಿ ಕಸ ತೆಗೆಯುವ ವೇಳೆ ಟವರ್ ಇದ್ದ ಬಿಲ್ಡಿಂಗ್ ಬಿರುಕು ಬಿದ್ದು ಟವರ್ ಭೂಮಿಗೆ ಬಿದ್ದಿದೆ ಎಂದು ಅಲ್ಲಿನ ಸುತ್ತಮುತ್ತಲಿನ ಸ್ಥಳೀಯರು ಹೇಳುತ್ತಿದ್ದಾರೆ. ಧನ್ಯವಾದಗಳು

ಸರ್ಕಾರಕ್ಕೆ ಮದ್ಯ ಪ್ರಿಯರಿಂದಲೇ ಆದಾಯ ಏರಿಕೆ!!

ಎಲ್ಲರಿಗೂ ನಮಸ್ಕಾರ, ಕಾಂಗ್ರೆಸ್ ಗ್ಯಾರಂಟಿ ಯಾಗಿ ಸರ್ಕಾರದ ಖಜನೆ ಖಾಲಿಯಾಗಿತ್ತು ಆದರೆ ಈಗ ಮಧ್ಯ ಮಾರಾಟದಿಂದಲೇ ನಮ್ಮ ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತಿದೆ. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ ನಿರೀಕ್ಷೆಗೂ ಮೀರಿದ ಲಾಭವನ್ನು ತಂದುಕೊಟ್ಟಿದೆ ಎಂದು ಹೇಳಿದರೆ ಸುಳ್ಳಾಗದು. 8 ತಿಂಗಳಿಗೆ ಬರೊಬ್ಬರಿ 22 ಕೋಟಿ ಇನ್ಕಮ್! ಚಳಿಗಾಲವೇ ಆದಾಯ ಹೆಚ್ಚಿಗೆ ಬರೋದಿಕ್ಕೆ ಕಾರಣವಂತೆ. ಬೆಲೆ ಏರಿಕೆ ಬಳಿಕ ಹೆಚ್ಚುವರಿಯಾಗಿ ಶೇಕಡ 12ರಷ್ಟು ಆದಾಯ ಹೆಚ್ಚಳ. ನವೆಂಬರ್ ನಲ್ಲಿ ಬರೋಬ್ಬರಿ 25೦೦ ಕೋಟಿ ಹೆಚ್ಚುವರಿ ಆದಾಯ. ನವೆಂಬರ್ ನಲ್ಲಿ ಸರಾಸರಿ ಆದಾಯ ದಿನಕ್ಕೆ 95 ಕೋಟಿಗೆ ಏರಿಕೆ. ಅಬಕಾರಿ ಇಲಾಖೆ ಖಜಾನೆಗೆ ಹರಿದು ಬಂದ ಆದಾಯ,  ಬಿಯರ್ ಮಾರಾಟ ಏರಿಕೆ.., ಮಧ್ಯದಿಂದಲೇ ಹಣದ ಹೊಳೆ! ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಾರಿ ಆದಾಯಕರವಾಗಿದೆ. ಕಳೆದ ವರ್ಷ ದಿನಕ್ಕೆ 80 ಕೋಟಿ ಆದಾಯ, ಈ ವರ್ಷ 90 ಕೋಟಿಗೆ ಏರಿಕೆ. ನವೆಂಬರ್ ನಲ್ಲಿ 35 ಲಕ್ಷ ಕೇಸ್ ಬಿಯರ್,  58 ಲಕ್ಷ ಬಾಕ್ಸ್ ವಿಸ್ಕಿ, ಬ್ರಾಂಡ್, ರಮ್, ಜಿಮ್, ವೈನ್ ಮಾರಾಟ. ಧನ್ಯವಾದಗಳು,

ಕರ್ನಾಟಕದಂತೆ ತೆಲಂಗಾಣದಲ್ಲಿ 6 ಗ್ಯಾರಂಟಿ ಫಿಕ್ಸ್ !

ಎಲ್ಲರಿಗೂ ನಮಸ್ಕಾರ, ತೆಲಂಗಾಣದ ನೂತನ ಸಿಎಂ ಆಗಿ ರೇವಂತ್ ರೆಡ್ಡಿ ಆಯ್ಕೆಯಾಗಿದ್ದಾರೆ. ಅವರು ಕರ್ನಾಟಕದಂತೆಯೇ, ತೆಲಂಗಾಣದಲ್ಲಿಯೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ 6 ಗ್ಯಾರಂಟಿಗಳನ್ನು ಅಯೋಜಿಸುವುದಾಗಿ ಭರವಸೆ ಕೊಟ್ಟಿದ್ದರು. ಅದರಂತೆಯೇ ಈಗ 6 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. *ಮ ಹಾಲಕ್ಷ್ಮಿ ಯೋಜನೆ. ಉಚಿತ ಪ್ರಯಾಣ   ತೆಲಂಗಾಣದಲ್ಲಿ ಮಹಾಲಕ್ಷ್ಮಿ ಯೋಜನೆ ಘೋಷಿಸಿದೆ. ಈ ಯೋಜನೆಯಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಗೆ 2500 ರೂಪಾಯಿ ನೀಡಲಾಗುವುದು. * ಇದೀಗ ತೆಲಂಗಾಣದಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಆರ್​ಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಕಲ್ಪಿಸಲಾಗಿದೆ. * 500 ರೂಗೆ ಗ್ಯಾಸ್ ಸಿಲಿಂಡರ್ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿದರೆ 500ರೂಪಾಯಿಗೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು. ಪ್ರಸ್ತುತ ಮೋದಿ ಸರ್ಕಾರ 1000 ರೂಪಾಯಿಗೆ ಸಿಲಿಂಡರ್ ನೀಡುತ್ತಿದೆ. ಹಾಗಾಗಿ ಈ ಹೊರೆಯನ್ನ ತಗ್ಗಿಸಲು ಕಾಂಗ್ರೆಸ್ ಪಕ್ಷ 500 ರೂಪಾಯಿಗೆ ನೀಡುವುದಾಗಿ ಭರವಸೆ ನೀಡಿದೆ. * ರೈತ ಭರೋಸಾ ಯೋಜನೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ರೈತ ಭರೋಸಾ ಯೋಜನೆಯನ್ನು ಘೋಷಿಸಿದ್ದಾರೆ. ರೈತ ಭರೋಸಾ ಯೋಜನೆಯಡಿ ಅನ್ನದಾತನಿಗೆ 15,000 ನೆರವು ನೀಡಲಾಗುವುದು. ಕೃಷಿ ಕಾರ್ಮಿಕರಿಗೆ 12 ಸಾವಿರ ನೀಡಲಾಗುವುದು. ಪ್ರತಿ ಕ್ವಿಂಟಾಲ್ ಭತ್ತಕ್ಕೆ 500 ರೂ ಬೋನಸ್ ಸಹ ನೀಡಲಾಗುವುದು ಎಂದು ಭರವಸೆ

ಶಾಕಿಂಗ್: ಮತ್ತೆ ನಂದಿನಿ ಹಾಲಿನ ದರ ಏರಿಕೆ !

ಎಲ್ಲರಿಗೂ ನಮಸ್ಕಾರ, KMF ಅನ್ನು ರೂಪಿಸುವ ಡೈರಿ ಸಹಕಾರಿಗಳಲ್ಲಿ ಮೊದಲನೆಯದು 1955 ರಲ್ಲಿ ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ ಪ್ರಾರಂಭವಾಯಿತು. ಕೆಎಂಎಫ್ ಅನ್ನು 1974 ರಲ್ಲಿ ಕರ್ನಾಟಕ ಡೈರಿ ಡೆವಲಪ್‌ಮೆಂಟ್ ಕಾರ್ಪೊರೇಶನ್ (ಕೆಡಿಡಿಸಿ) ಎಂದು ವಿಶ್ವಬ್ಯಾಂಕ್ ನಡೆಸುತ್ತಿರುವ ಡೈರಿ ಅಭಿವೃದ್ಧಿ ಯೋಜನೆಯನ್ನು ಕಾರ್ಯಗತಗೊಳಿಸಲು ಸ್ಥಾಪಿಸಲಾಯಿತು. ಕರ್ನಾಟಕ ಹಾಲು ಒಕ್ಕೂಟವು ತನ್ನ ಹಾಲು, ಹಾಲಿನ ಉತ್ಪನ್ನಗಳು ಮತ್ತು ಸಿಹಿತಿಂಡಿಗಳನ್ನು ನಂದಿನಿ ಹೆಸರಿನಲ್ಲಿ ಮಾರಾಟ ಮಾಡುವ ಹಾಲು ಮತ್ತು ಅದರ ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ಹೊಂದಿದೆ. ಪಾಶ್ಚರೈಸ್ಡ್ ಹಾಲು, ಟೋನ್ಡ್ ಹಾಲು, ಪ್ರಮಾಣಿತ ಹಾಲು, ತುಪ್ಪ, ಬೆಣ್ಣೆ ಹಾಲು, ಮೊಸರು, ಬೆಣ್ಣೆ, ಪನೀರ್, ಚಾಕೊಲೇಟ್ಗಳು, ಮೈಸೂರು ಪಾಕ್ . ನಂದಿನಿ ಬ್ರಾಂಡ್ ಹೆಸರಲ್ಲಿ ಕೆಎಂಎಫ್ ತಯಾರಿಸಿದ ಕೆಲವು ಉತ್ಪನ್ನಗಳು ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಲಭ್ಯವಿದೆ. ಹೊಸ ವರ್ಷಕ್ಕೆ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಕಂಡು ಬಂದಿದೆ. ಹಿಂದೆ ಆರ್ಥಿಕ ನಷ್ಟದ ಹಿನ್ನೆಲೆ 5 ರೂ ಹೆಚ್ಚಿಸುವಂತೆ ಸರ್ಕಾರಕ್ಕೆ ಕೆಎಂಎಫ್ ಮನವಿ ಮಾಡಿತ್ತು. ಆದರೆ ಸರ್ಕಾರವು 3 ರೂ ಮಾತ್ರ ಏರಿಕೆ ಮಾಡಿತ್ತು.  ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಬಗ್ಗೆ ಸದ್ಯ ಚಿಂತನೆ ನಡೆ

ದಸರಾ ಆನೆ ಅರ್ಜುನನಿಲ್ಲದ ಕಾಡು!

ಎಲ್ಲರಿಗೂ ನಮಸ್ಕಾರ, ಬಾರಿ ದುಃಖದಾಯಕ ವಿಷಯವೇನೆಂದರೆ, 64 ವರ್ಷದ ದಸರಾ ಆನೆ ಅರ್ಜುನ ಸತತ ಎಂಟು ಬಾರಿ ದಸರಾ ಅಂಬರಿಯನ್ನು ಎತ್ತಿದ್ದಾನೆ. ಆದರೆ ಅರ್ಜುನನು ಒಂಟಿ ಸಲಗದ ಕಾಡಾನೆ ಜೊತೆ ಕಾದಾಡಿ ಎಸಳೂರು ಫಾರೆಸ್ಟ್ ಸಕಲೇಶಪುರ ತಾಲ್ಲೂಕು ಹಾಸನ್ ಡಿಸ್ಟಿಕ್ ಅಲ್ಲಿ ಪ್ರಾಣ ಬಿಟ್ಟಿದೆ.  ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯ ವೇಳೆ ಒಂಟಿ ಸಲಗ ಹೊಟ್ಟೆಗೆ  ತಿವಿದಿದ್ದರಿಂದ ಸಾಕಾನೆ ಅರ್ಜುನ ಸಾವಿಗೀಡಾಗಿದೆ.  ಕಾರ್ಯಾಚರಣೆ ವೇಳೆ ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಕೊನೆಗೆ ಒಂಟಿಸಲಗದ ಜೊತೆ ಅರ್ಜುನ ಆನೆಯು ಒಂಟಿಯಾಗಿ ಹೋರಾಟ ನಡೆಸಿದೆ. ಈ ಕಾಳಗ ಆರಂಭವಾಗುತ್ತಿದ್ದಂತೆ ಅರ್ಜುನನ ಮೇಲಿನಿಂದ ಮಾವುತ ಇಳಿದು ಓಡಿದ್ದಾರೆ. ಅರ್ಜುನ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಅರ್ಜುನ ಆನೆ 288ಮೀ ಎತ್ತರ, 5800 ರಿಂದ 6000 ಕೆ.ಜಿ. ತೂಕ ಇರುವುದು ಇತ್ತೀಚೆಗೆ ದಸರಾದಲ್ಲಿ ಭಾಗವಹಿಸಿದ್ದ ಸಂದರ್ಭ ಗೊತ್ತಾಗಿತ್ತು. ಅರ್ಜುನನ ಮಾವುತನಿಗೆ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಕೇಳಿಕೊಳ್ಳೋಣ. ಇದರ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮತ್ತೆ ಹುಟ್ಟಿ ಬಾ ಅರ್ಜುನ! ಧನ್ಯವಾದಗಳು,

ಚೀನಾದಲ್ಲಿ ಶುರು ಆಯ್ತು ಹೊಸ ತಳಿ ನ್ಯೂಮೋನಿಯಾ ಆತಂಕ

 ಎಲ್ಲರಿಗೂ ನಮಸ್ಕಾರ, ಕೋವಿಡ್ ಸೋಂಕಿನ ನಂತರ ಚೀನಾದಲ್ಲಿ ಈಗ ಮತ್ತೊಂದು ಸೋಂಕು ಶುರುವಾಗಿದೆ ನ್ಯೂಮೋನಿಯಾ, ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬಂದಿದ್ದು ಎಲ್ಲರಲ್ಲಿ ಆತಂಕ ಉಂಟು ಮಾಡಿದೆ. ಈ ಸೋಂಕಿಗೆ ಮಕ್ಕಳೆ ಟಾರ್ಗೆಟ್, ಇದು ವೈರಲ್ ಇನ್ಫೆಕ್ಷನ್ ಆಗಿತ್ತು, ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತಿದೆ. ಚೀನಾ ಮತ್ತು ಅಮೆರಿಕ ದೇಶಕ್ಕೆ ಬಂದ ನಂತರ ನಮ್ಮ ಭಾರತಕ್ಕೂ ಕಾಲಿಟ್ಟಿದೆ. ಈ ಸೋಂಕು ನಮ್ಮ ರಾಜಧಾನಿ ಬೆಂಗಳೂರಿನಲ್ಲೂ ಕಳೆದ ಒಂದು ವಾರದಿಂದ ಕಂಡು ಬಂದಿದೆ. ನಮ್ಮ ರಾಜಧಾನಿಯಲ್ಲಿ ಶೇಕಡ 25ಕ್ಕೂ ಹೆಚ್ಚು ಸೋಂಕು ದೃಢಪಟ್ಟಿದೆ. 15 ವರ್ಷದ ಒಳಗಿನ ಮಕ್ಕಳಲ್ಲಿ ಹೆಚ್ಚು ಈ ಸೋಂಕು ದೃಢಪಟ್ಟಿದ್ದು, ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಪೋಷಕರು ಹುಷಾರಾಗಿ ಇರಬೇಕೆಂದು ಕೇಳಿಕೊಳ್ಳುತ್ತೇವೆ. ನ್ಯೂಮೋನಿಯಾ ಸೋಂಕಿನ ರೋಗಲಕ್ಷಣಗಳು ; * ಜ್ವರ * ನೆಗಡಿ ಮತ್ತು ಕೆಮ್ಮು * ಮೈಕೈ ನೋವು * ಸುಸ್ತು * ಉಸಿರಾಟದ ತೊಂದರೆ ಇದನ್ನು ತಡೆಯಲು ಪೋಷಕರು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ಪೋಷಕರು ಮಕ್ಕಳ ಕಡೆ ಹೆಚ್ಚು ಗಮನ ಹರಿಸಬೇಕು ಮತ್ತು ಮಕ್ಕಳಿಗೆ ಶೀತವಾಗದಂತೆ ನೋಡಿಕೊಳ್ಳಬೇಕು. ಮಕ್ಕಳನ್ನು ಯಾವಾಗಲೂ ಶುಚಿಯಾಗಿಡಬೇಕು‌.  ಧನ್ಯವಾದಗಳು.