lichi fruits benefits of skin...., !!ಲಿಚ್ಚಿ ಹಣ್ಣಿನಲ್ಲಿದೆ ನಿಮ್ಮ ಚರ್ಮದ ಆರೋಗ್ಯ!!

ಎಲ್ಲರಿಗೂ ನಮಸ್ಕಾರ,
ನಿಮ್ಮ ಹಣ್ಣಿನ ಬುಟ್ಟಿಯಲ್ಲಿ ಮಾವಿನಹಣ್ಣು, ಕಲ್ಲಂಗಡಿಗಳು ಜಾಗ ಮಾಡಿಕೊಂಡಿವೆ. ಈಗ ಲಿಚ್ಚಿ ಹಣ್ಣಿನ ಸರದಿ. ಹೌದು, ಲಿಚ್ಚಿ ಅಥವಾ ಲಿಚಿ ಮೃದುವಾದ, ಬಿಳಿ ತಿರುಳಿನ ಹಣ್ಣಾಗಿದ್ದು, ಇದನ್ನು ಉಷ್ಣವಲಯ ಮತ್ತು ಉಪ-ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
ಬೇಸಿಗೆ ಕಾಲದಲ್ಲಿ ಬಹಳ ಕಡಿಮೆ ಅವಧಿಯವರೆಗೆ ಲಭ್ಯವಿದೆ. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಸುಲಭವಾಗಿ ರಕ್ತ ಪರಿಚಲನೆಯಾಗಲು ಸಹಾಯ ಮಾಡುವ ಈ ರಸಭರಿತ ಮತ್ತು ರುಚಿಕರವಾದ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಸೂರ್ಯನ ಕಿರಣಗಳಿಂದ ನಿಮ್ಮ ಚರ್ಮ ಕಪ್ಪಾಗುವಿಕೆ, ಅಕಾಲಿಕ ವಯಸ್ಸಾದ ಹಾಗೂ ದೀರ್ಘಾವಧಿಯಲ್ಲಿ ಚರ್ಮದ ಕ್ಯಾನ್ಸರ್ ಗೆ ಕಾರಣವಾಗಬಹುದು, ಆದರೆ ಲಿಚ್ಚಿ ಹಣ್ಣಿನ ಸಾರವು ಸೂರ್ಯನಿಂದ ಬರುವ ಯುವಿ ವಿಕಿರಣದ ಹಾನಿಕಾರಕ ಪರಿಣಾಮದಿಂದ ಚರ್ಮವನ್ನು ರಕ್ಷಿಸುತ್ತದೆ. ಲಿಚ್ಚಿ ಹಣ್ಣಿನ ಸಾರದಲ್ಲಿರುವ ಪಾಲಿ ಪಿನಾಲ್ಗಳು ಚರ್ಮ ಕಪ್ಪಾಗುವಿಕೆಯನ್ನು ತಡೆಯುತ್ತದೆ. ಇದು ಚರ್ಮದ ಕಲೆಗಳನ್ನು ಅಳಿಸುತ್ತದೆ. 
ಲಿಚ್ಚಿ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಿಂದ ಕೂಡಿರುವ ರುಚಿಕರವಾದ ಲಿಚ್ಚಿ ಹಣ್ಣಿನಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.
ನ್ಯೂಟ್ರಿಷನಿಸ್ಟ್ ಪ್ರಕಾರ, ಲಿಚ್ಚಿ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿದೆ, ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಲಿಚ್ಚಿ ಹಣ್ಣಿನಲ್ಲಿ ವಿಟಮಿನ್ ಡಿ ಕೂಡ ಸಮೃದ್ಧವಾಗಿದ್ದು, ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಈ ಹಣ್ಣು ಬಿಸಿ ವಾತಾವರಣದಲ್ಲಿ ನಿಮ್ಮನ್ನು ಹೈಡ್ರೀಕರಿಸುತ್ತದೆ.
ಸ್ವಲ್ಪ ಹವಾಮಾನ ಬದಲಾವಣೆಯಾದರೂ ಶೀತ ಮತ್ತು ಕೆಮ್ಮಿಗೆ ಗುರಿಯಾಗುವುದು ಸಹಜ. ಇಂತಹ ಸಮಯದಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿ ದುರ್ಬಲವಾಗುವ ಸಾಧ್ಯತೆಯಿದೆ. ಆದ್ದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಲಿಚ್ಚಿ ಸೇವಿಸಿ. ಲಿಚ್ಚಿಯಲ್ಲಿರುವ ವಿಟಮಿನ್ ಸಿ ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ . ನೀರಿನಲ್ಲಿ ಕರಗುವ ಈ ವಿಟಮಿನ್ ಆಂಟಿ ಆಕ್ಸಿಡೆಂಟ್‌ಗಳಿಂದ ತುಂಬಿದ್ದು, ಇದು ದೇಹವು ಶೀತ ಮತ್ತು ಜ್ವರಗಳಂತಹ ಸಾಮಾನ್ಯ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಇದನ್ನು ಚಿಕ್ಕ ಮಕ್ಕಳಿಗೆ ಕೊಡಲು ಹೆಚ್ಚು ಶಿಫಾರಸು ಮಾಡಲಾಗುತ್ತದೆ. 
ಧನ್ಯವಾದಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು?!!

ಕಿಡ್ನಿಯ ಬಗ್ಗೆ ವಿವರಗಳು? ಹಿಂದೂ ವಿಶ್ವ ಕಿಡ್ನಿ ದಿನ!!

ಸದ್ಯದಲ್ಲಿ ಚಾಲಕರ ಹಿತ ಮೆಟ್ರೋ ರೈಲು ಆಗಮನ!