ಸದ್ಯದಲ್ಲಿ ಚಾಲಕರ ಹಿತ ಮೆಟ್ರೋ ರೈಲು ಆಗಮನ!

ಎಲ್ಲರಿಗೂ ನಮಸ್ಕಾರಗಳು,
ಚೀನಾ ಕಂಪನಿಯಿಂದ  ರಫ್ತಾದ ರೈಲು ಚೆನ್ನೈಗೆ ಆಗಮಿಸಿದ ಬಳಿಕ ಬೆಂಗಳೂರಿಗೆ ರವಾನೆ!!

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚರಿಸಲಿರುವ ಚಾಲಕರ ಹಿತ ಮೆಟ್ರೋ ರೈಲನ್ನು ಚೀನಾದಿಂದ ಚೆನ್ನಾಗಿ ರಫ್ತು ಮಾಡಲಾಗಿದೆ . ಇದು ಫೆಬ್ರವರಿ ಮೊದಲ ವಾರದೊಳಗೆ ಚೆನ್ನೈ ಬಂದರಿಗೆ ತಲುಪಲಿದ್ದು ಬಳಿಕ ರಸ್ತೆ ಮಾರ್ಗವಾಗಿ ನಗರದ ಇಬ್ಬಗೋಡಿ ಡಿಪೋಗೆ ತಲುಪಲಿದೆ . ಚೀನಾದಿಂದ ಅಡಗಿನಲ್ಲಿ ರೈಲನ್ನು ಕಳಿಸಿ ಕೊಟ್ಟಿರುವ ವಿಡಿಯೋ ತುಣುಕು ಜಾಲತಾಣಗಳಲ್ಲಿ ವೈರಲಾಗುತ್ತಿದೆ . ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಅಧಿಕಾರಿಗಳ ತಂಡ ಇತ್ತೀಚಿಗೆ ಚೀನಾಗೆ ತೆರಳಿ ರೈಲನ್ನು ಪರೀಕ್ಷಿಸಿತ್ತು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರೈಲನ್ನು ಕಳುಹಿಸಿಕೊಡಲಾಗಿದೆ. ಈ ರೈಲು ಬೆಂಗಳೂರು ತಲುಪಿದ ಬಳಿಕ ಸುಮಾರು ಮೂರು ತಿಂಗಳು ಪ್ರಾಯೋಗಿಕ ಚಾಲನ ಕಾರ್ಯ ನಡೆಯಲಿದೆ. ಹೆಬ್ಬಗೋಡಿ ಡಿಪೋದಲ್ಲಿ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನ ಮಾಡಿದ ಬಳಿಕ ಎಲೆಕ್ಟ್ರಾನಿಕ್ ಸಿಟಿ ಆರ್ವಿ ರಸ್ತೆಗೆ ಸಂಪರ್ಕ ಕಲ್ಪಿಸುವ 19 ಕಿಲೋಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಸಂಚರಿಸಲಿದೆ. ಸಾರ್ವಜನಿಕ ಸೇವೆಗೆ ತೆರೆದುಕೊಳ್ಳುವ ನೀರಿಕ್ಷೆ ಇದೆ.
ಚೀನಾ ಮೂಲದ ಸಂಸ್ಥೆ
ಚೀನಾ ರೋಲಿಂಗ್ ರೈಲ್ವೆ ಸ್ಟಾಕ್ ಕಾರ್ಪೊರೇಷನ್ ಸಂಸ್ಥೆ ಒಟ್ಟು 216 ಕೋಚ್ ಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿದೆ. ಮೂಲ ಮಾದರಿಯ 2 ರೈಲುಗಳು ಚೀನಾದಲ್ಲಿ ನಿರ್ಮಾಣವಾಗುತ್ತಿದೆ. ಇದರ ಸಂಸ್ಥೆಯಾಗಿರುವ ಕೊಲ್ಕತ್ತಾದ ತೀರ್ಥ ರೈಲು ಫ್ಯಾಕ್ಟರಿ ಉಳಿದ ಉಳಿದ ಕೋಚ್ ಗಳನ್ನು ನಿರ್ಮಿಸಲಿದೆ.
ಟ್ರೈನ್ ನ ವಿಶೇಷತೆಗಳಿಗೂ
ಪ್ರೋಗ್ರಾಮಿಂಗ್ ಆಧಾರದಲ್ಲಿ ಚಾಲಕರ ಹಿತ ಮೆಟ್ರೋ ರೈಲು ಸಂಚರಿಸುತ್ತದೆ. ಕಂಟ್ರೋಲ್ ರೂಂನಲ್ಲಿ ಈ ರೈಲಿನ ಮೇಲೆ ನಿಗ ವಹಿಸಲಾಗುತ್ತದೆ. 25 ಕಿ.ಮೀ ವಿದ್ಯುತ್ ಸಹಾಯದ ಸಾಮರ್ಥ್ಯದಿಂದ ರೈಲು ಸಂಚರಿಸುತ್ತದೆ. ಅಂದಾಜು ಎರಡು ವರ್ಷ ಕಾಲ ಹಳದಿ ಮಾರ್ಗದಲ್ಲಿ ಚಾಲಕ ಸಹಿತವಾಗಿ ಈ ರೈಲು ಸಂಚರಿಸುತ್ತವೆ. ಬಳಿಕ ವ್ಯವಸ್ಥೆ ಚಾಲಕ ರಹಿತವಾಗಿ ಈ ರೈಲುಗಳು ಓಡಾಡಲಿದೆ.
ಧನ್ಯವಾದಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚೀನಾದಲ್ಲಿ ಶುರು ಆಯ್ತು ಹೊಸ ತಳಿ ನ್ಯೂಮೋನಿಯಾ ಆತಂಕ

ಕಂಡಲ್ಲೆಲ್ಲ ಕಲ್ಲಂಗಡಿ ದರ್ಬಾರ್!

ಕೆಪಿಸಿಎಲ್ ಉದ್ಯೋಗಾಂಕ್ಷಿಗಳಿಗೆ ನಿರಾಸೆ!?