ಭಾರತ ದೇಶದಲ್ಲಿ ಜನಿಸಿದ ನಾವೆಲ್ಲರೂ ಹೆಮ್ಮೆಪಡುವ ವಿಷಯ!!!!!!!..... ಜಾಗತಿಕ ಮಟ್ಟಕ್ಕೆ ಭಾರತದ ಕರೆನ್ಸಿ????

ಎಲ್ಲರಿಗೂ ನಮಸ್ಕಾರಗಳು,
ನಿಜವಾಗ್ಲೂ ಭಾರತ ದೇಶದಲ್ಲಿ ಜನಿಸಿದ ನಾವೆಲ್ಲರೂ ಹೆಮ್ಮೆ ಪಡಲೇಬೇಕು ಏಕೆಂದರೆ ಮೊಟ್ಟಮೊದಲ ಬಾರಿಗೆ ನಮ್ಮ ಭಾರತದ ಕರೆನ್ಸಿ ಜಾಗತಿಕ ಮಟ್ಟದಲ್ಲಿ ಹೆಸರಾಗಿದೆ. ತೈಲ ಖರೀದಿಗೆ ರೂಪಾಯಿಯಲ್ಲಿ ಪಾವತಿ!!!!!
ನಮ್ಮ ದೇಶದ ಕರೆನ್ಸಿ ಮೊದಲ ಬಾರಿಗೆ ಸಾಧನೆಯನ್ನು ಉಂಟು ಮಾಡಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಕರೆನ್ಸಿ ಮೌಲ್ಯ ಹೆಚ್ಚಿದೆ.
ಅದೇನೆಂದರೆ, ಅರಬ್ ಸಂಯುಕ್ತ ಸಂಸ್ಥಾನದಿಂದ ಕಚ್ಚಾತೈಲ ಖರೀದಿಗೆ ಭಾರತ ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯದಲ್ಲಿ ಪಾವತಿ ಮಾಡಿದ್ದು, ದೇಶದ ಕರೆನ್ಸಿಯನ್ನು ಜಾಗತಿಕ ಮಟ್ಟಕ್ಕೆ ಒಯ್ಯುವನಿಟ್ಟಿನಲ್ಲಿ ಇದೊಂದು ದೊಡ್ಡ ಮುನ್ನಡೆಯಾಗಿದೆ. 
ಟೈಲಕ್ಕಾಗಿ ಆಮದಿನ ಮೇಲೆ ಶೇಕಡ 85ರಷ್ಟು ಅವಲಂಬಿಸಿರುವ ಭಾರತ, ಡಾಲರ್ ಬದಲು ರೂಪಾಯಿಯಲ್ಲೇ ವ್ಯವಹಾರವನ್ನು ಇತ್ಯರ್ಥ ಪಡಿಸುವ ಮೂಲಕ ವಹಿವಾಟು ವೆಚ್ಚವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಜಗತ್ತಿನ ಮೂರನೇ ಅತಿ ದೊಡ್ಡ ಇಂಧನ ಬಳಕೆದಾರ ದೇಶವಾದ ಭಾರತ, ಪ್ರಥಮ ಬಾರಿಗೆ ತೈಲ ಸಮೃದ್ಧ ಯುಎಇ ಇಂದ ರುಪಾಯಿ ಮೌಲ್ಯದಲ್ಲಿ ಕಚ್ಚಾತ ಇಲ್ಲ ಖರೀದಿಸಿದ್ದು ಸ್ಥಳೀಯ ಕರೆನ್ಸಿಯನ್ನು ಜಾಗತಿಕ ವ್ಯವಹಾರದಲ್ಲಿ ಬಳಸುವ ಗುರಿ ಸಾಧನೆಗೆ ನೆರವಾಗಿದೆ. ಈ ಹಿನ್ನೆಲೆಯಲ್ಲಿ ಇತರ ತೈಲ ಸರಬರಾಜುದಾರರ ಜೊತೆ ಕೂಡ ಇಂಥದ್ದೇ ವ್ಯವಹಾರ ಕುದಿರಿಸಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಕರೆನ್ಸಿಯ ಅಂತರಾಷ್ಟ್ರೀಕರಣ ಒಂದು ಪ್ರಕ್ರಿಯೆಯಾಗಿದ್ದು ಅದಕ್ಕೆ ನಿರ್ದಿಷ್ಟ ಗುರಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜುಲೈ ನಲ್ಲಿ ಒಡಂಬಡಿಕೆ
ರೂಪಾಯಿಯಲ್ಲಿ ಖರೀದಿಗೆ ಯುಎಇ ಜೊತೆ ಭಾರತ ಜುಲೈನಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಅದರ ಬೆನ್ನಲ್ಲೇ ಅಬುದಾಬಿ ರಾಷ್ಟ್ರೀಯ ತೈಲ ಕಂಪನಿಯಿಂದ 10 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಕರಿದಿಗೆ ರೂಪಾಯಿ ಮೌಲ್ಯದಲ್ಲಿ ಹಣ ಪಾವತಿ ಮಾಡಿದೆ. 
 ಈ ವಿಷಯ ನಮ್ಮೆಲ್ಲರಿಗೂ ಸಹ ಹೆಮ್ಮೆ ತಂದುಕೊಡುವ ವಿಷಯವಾಗಿದೆ.
ನನ್ನ ಮುಂದಿನ ಎಲ್ಲ ಹೊಸ ಹೊಸ ವಿಷಯ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ....
ಧನ್ಯವಾದಗಳು....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಂಗಳೂರಿಗೆ ಕುಡಿಯುವ ನೀರಿನ ಬೇಗೆ?

ಸದ್ಯದಲ್ಲಿ ಚಾಲಕರ ಹಿತ ಮೆಟ್ರೋ ರೈಲು ಆಗಮನ!

ಕಿಡ್ನಿಯ ಬಗ್ಗೆ ವಿವರಗಳು? ಹಿಂದೂ ವಿಶ್ವ ಕಿಡ್ನಿ ದಿನ!!