ದಸರಾ ಆನೆ ಅರ್ಜುನನಿಲ್ಲದ ಕಾಡು!

ಎಲ್ಲರಿಗೂ ನಮಸ್ಕಾರ,
ಬಾರಿ ದುಃಖದಾಯಕ ವಿಷಯವೇನೆಂದರೆ, 64 ವರ್ಷದ ದಸರಾ ಆನೆ ಅರ್ಜುನ ಸತತ ಎಂಟು ಬಾರಿ ದಸರಾ ಅಂಬರಿಯನ್ನು ಎತ್ತಿದ್ದಾನೆ. ಆದರೆ ಅರ್ಜುನನು ಒಂಟಿ ಸಲಗದ ಕಾಡಾನೆ ಜೊತೆ ಕಾದಾಡಿ ಎಸಳೂರು ಫಾರೆಸ್ಟ್ ಸಕಲೇಶಪುರ ತಾಲ್ಲೂಕು ಹಾಸನ್ ಡಿಸ್ಟಿಕ್ ಅಲ್ಲಿ ಪ್ರಾಣ ಬಿಟ್ಟಿದೆ. 
ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯ ವೇಳೆ ಒಂಟಿ ಸಲಗ ಹೊಟ್ಟೆಗೆ  ತಿವಿದಿದ್ದರಿಂದ ಸಾಕಾನೆ ಅರ್ಜುನ ಸಾವಿಗೀಡಾಗಿದೆ. 
ಕಾರ್ಯಾಚರಣೆ ವೇಳೆ ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಕೊನೆಗೆ ಒಂಟಿಸಲಗದ ಜೊತೆ ಅರ್ಜುನ ಆನೆಯು ಒಂಟಿಯಾಗಿ ಹೋರಾಟ ನಡೆಸಿದೆ. ಈ ಕಾಳಗ ಆರಂಭವಾಗುತ್ತಿದ್ದಂತೆ ಅರ್ಜುನನ ಮೇಲಿನಿಂದ ಮಾವುತ ಇಳಿದು ಓಡಿದ್ದಾರೆ. ಅರ್ಜುನ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಅರ್ಜುನ ಆನೆ 288ಮೀ ಎತ್ತರ, 5800 ರಿಂದ 6000 ಕೆ.ಜಿ. ತೂಕ ಇರುವುದು ಇತ್ತೀಚೆಗೆ ದಸರಾದಲ್ಲಿ ಭಾಗವಹಿಸಿದ್ದ ಸಂದರ್ಭ ಗೊತ್ತಾಗಿತ್ತು.
ಅರ್ಜುನನ ಮಾವುತನಿಗೆ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಕೇಳಿಕೊಳ್ಳೋಣ. ಇದರ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮತ್ತೆ ಹುಟ್ಟಿ ಬಾ ಅರ್ಜುನ!
ಧನ್ಯವಾದಗಳು,

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಿಲಿಂಡರ್ ಸಬ್ಸಿಡಿ ಯೋಜನೆ!!!

ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು?!!

ಬೆಂಗಳೂರಿಗೆ ಕುಡಿಯುವ ನೀರಿನ ಬೇಗೆ?