ತಲೆಯಲ್ಲಿ ಹೊಕ್ಕಿದ ಹುಳು!!!

ಅಮೆಜಾನ್ ಅರಣ್ಯಕ್ಕೆ ಹೋಗಿದ್ದಾಗ 26 ವರ್ಷದ ಯುವತಿಯ ತಲೆ ಹೊಕ್ಕಿದ ಬಾಟ್ ಫ್ಲ್ವ ಲಾರ್ವ ವನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ರಾಜಧಾನಿಯ ಖಾಸಗಿ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದೆ.
ಯುವತಿಯು ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ತಲೆಯಲ್ಲಿ ಹೂತ ಸಮಸ್ಯೆಗೆ ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ಆಗಮಿಸಿದ್ದರು. ಈ ಕುರಿತು ವೈದ್ಯರು ಸೂಕ್ಷ್ಮವಾಗಿ ಪರೀಕ್ಷೆ ನಡೆಸಿದಾಗ ರೋಗಿಯು ಮಯಾಸಿಸ್ ತೊಂದರೆಯಿಂದ ಬಳಲುತ್ತಿದ್ದುದನ್ನು ತಿಳಿದು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ತಲೆಯ ಚರ್ಮದ ಒಳಗಿದ್ದ ಹುಳುವನ್ನು ಹೊರ ತೆಗೆದಿದ್ದಾರೆ.
ಈ ಚಿಕಿತ್ಸೆಯಿಂದ ರೋಗಿಗೆ ಯಾವುದೇ ಸಂಕೀರ್ಣ ತೊಂದರೆಗಳು ಆಗಿಲ್ಲ ಸೂಕ್ಷ್ಮ ರೀತಿಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ ಉಳುವನ್ನು ಹೊರತೆಗೆಯಲಾಗಿದ್ದು ರೋಗಿ ಸಂಪೂರ್ಣ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಸಲಹಾ ತಜ್ಞ ಡಾಕ್ಟರ್ ರಾಘವೇಂದ್ರ ಕಲಾದಗಿ ಹೇಳಿದ್ದಾರೆ. ಅಮೆರಿಕದ ಪರಿಸರ ಸಂಬಂಧಿತ ಪ್ರವಾಸಿ ತಾಣಗಳು ಅಮೆಜಾನ್ ಕಾಡುಗಳಂತ ಸ್ಥಳಗಳಿಗೆ ಪ್ರಯಾಣ ಬೆಳೆಸುವವರು ಈ ತೊಂದರೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಭಾರತದಲ್ಲಿ ಇವು ಕಾಣಿಸುವುದಿಲ್ಲ ಎಂದು ಡಾಕ್ಟರ್ ನಿಮಾ ಡಯಾಸ್ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಂಗಳೂರಿಗೆ ಕುಡಿಯುವ ನೀರಿನ ಬೇಗೆ?

ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು?!!

ಸದ್ಯದಲ್ಲಿ ಚಾಲಕರ ಹಿತ ಮೆಟ್ರೋ ರೈಲು ಆಗಮನ!