ಪಂಪ ಸರೋವರಕ್ಕೆ ಬರುವ ಪ್ರವಾಸಿಗರ ಎಚ್ಚರ!

ಎಲ್ಲರಿಗೂ ನಮಸ್ಕಾರ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿವೆ. ಅಂಜನಾದ್ರಿ ಬೆಟ್ಟ, ಪಂಪ ಸರೋವರಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹನುಮ ಹುಟ್ಟಿದ ಸ್ಥಳ ಅಂಜನಾದ್ರಿ ಮತ್ತು ರಾಮನಿಗಾಗಿ ಕಾದಿದ್ದ ಶಬರಿಯ ಗುಹೆಯ ಸಮೀಪ ಪಂಪ ಸರೋವರವಿದೆ. ಹೀಗಾಗಿ ದೇಶದ ವಿವಿಧ ಭಾಗಗಳಿಂದ ಪ್ರತಿನಿತ್ಯ ಪ್ರವಾಸಿಗರು ಬರುತ್ತಾರೆ. ಆದರೆ ಪಂಪ ಸರೋವರಕ್ಕೆ ಬರುವ ಭಕ್ತರ ಜೀವಕ್ಕೆ ಗ್ಯಾರಂಟಿ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ.
ಪಂಪಾ ಸರೋವರ ಪುರಾಣ ಪ್ರಸಿದ್ಧಿಯನ್ನು ಹೊಂದಿದೆ. ದೇಶದಲ್ಲಿ ಐದು ಪುಣ್ಯ ಸರೋವರಗಳಿದ್ದು ಅದರಲ್ಲಿ ಪಂಪ ಸರೋವರ ಕೂಡ ಒಂದು. ಪಂಪ ಸರೋವರದಲ್ಲಿ ಸ್ನಾನ ಮಾಡಿದರೆ ಪುಣ್ಯ ಬರುತ್ತದೆ ಅನ್ನೋ ನಂಬಿಕೆ ಇದೆ. ಇದೇ ಕಾರಣಕ್ಕೆ ಹೆಚ್ಚಿನ ಭಕ್ತರು ಪ್ರವಾಸಿಗರು ಬರುತ್ತಾರೆ. ಆದ್ರೆ ಮುಜರಾಯಿ ಇಲಾಖೆ ಸಿಬ್ಬಂದಿ ನಿರ್ಲಕ್ಷ ಮತ್ತು ಜಸ್ಕಾಂ ಸಿಬ್ಬಂದಿ ನಿರ್ಲಕ್ಷದಿಂದಾಗಿ ಭಕ್ತರ ಜೀವಕ್ಕೆ ಅಪಾಯ ಎದುರಾಗಿದೆ.
ಈ ಬಗ್ಗೆ ಸಾರ್ವಜನಿಕರು ಇಲಾಖೆ ಅಧಿಕಾರಿಗಳಿಗೆ ಮತ್ತು ಜಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಪ್ರತಿನಿತ್ಯ ಅನೇಕರು ಬಂದು ಇದೇ ವಿದ್ಯುತ್ ವೈರ್ ಗಳನ್ನು ತುಳಿದುಕೊಂಡೆ ಅಡ್ಡಾಡುತ್ತಿದ್ದಾರೆ. ವಯರ್ ಕಟ್ ಆಗಿರುವ ಕಡೆ ಕಾಲಿಟ್ಟರೆ ಜೀವ ಹೋಗುತ್ತೆ ಎಂದು ಸ್ಥಳೀಯ ನಿವಾಸಿ ಆತಂಕ ಹೋರಾ ಹಾಕಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಗಂಗಾವತಿ ತಹಶೀಲ್ದಾರ್ ವಿಶ್ವನಾಥ್ ಮುರುಡಿ ತಿಳಿಸಿದ್ದಾರೆ.
ಪಂಪ ಸರೋವರ ಸುತ್ತಮುತ್ತ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಹೈಮಸ್ಕ ದೀಪಾ ಸೇರಿದಂತೆ ಅನೇಕ ಕಡೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಬೇಕಾಬಿಟ್ಟಿಯಾಗಿ ವಿದ್ಯುತ್ ವಯರ್ಗಳನ್ನು ಹಾಕಲಾಗಿದೆ. ಅನೇಕ ಕಡೆ ಕಲ್ಲುಗಳನ್ನು ಇಟ್ಟು ವಿದ್ಯುತ್ ಸಂಪರ್ಕ ಇರುವ ವೈರ್ ಗಳನ್ನು ಬಿಡಲಾಗಿದೆ. ಯಾರಾದ್ರೂ ವಿದ್ಯುತ್ ತಂತಿಗಳನ್ನು ಗಮನಿಸದೆ ಹೋದ್ರೆ ಅಪಾಯ ಗ್ಯಾರಂಟಿ.
ಪ್ರತಿನಿತ್ಯ ಇಲ್ಲಿ ಸಾವಿರಾರು ಜನ ಬರ್ತಾರೆ, ಯಾರಾದ್ರೂ ವಿದ್ಯುತ್ ತಂತಿಗಳನ್ನು ಗಮನಿಸದೇ ಹೋದ್ರೆ ಅಪಾಯ ಗ್ಯಾರಂಟಿ ಎಂಬ ಸ್ಥಿತಿ ಇದೆ. ಇನ್ನು ವಿದ್ಯುತ್ ವೈಯರ್ ಗಳು ಕೈ ಸಿಗುವಂತಿವೆ. ನಡೆದುಕೊಂಡು ಹೋಗುವಾಗ ಕಾಲಿಗೆ ತಾಕುತ್ತಿವೆ. ಕೆಲವೇಡೆ ವಯರ್ ಕಟ್ಟಾಗಿರುವುದರಿಂದ ಮಕ್ಕಳು ಮುಟ್ಟಿದ್ರೆ ಜೀವ ಹೋಗೋದು ಗ್ಯಾರಂಟಿ.
ಪಂಪ ಸರೋವರಕ್ಕೆ ಬರುವ ಪ್ರವಾಸಿ ಕರೆ ಎಚ್ಚರ! ಜೆಸ್ಕಾಂ ನಿರ್ಲಕ್ಷಕ್ಕೆ ಬಾಯ್ ತೆರೆದು ಕಾಯುತ್ತಿವೆ ಅಪಾಯಕಾರಿ ವಿದ್ಯುತ್ ವಯರಗಳು.
ಧನ್ಯವಾದಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು?!!

ಕಿಡ್ನಿಯ ಬಗ್ಗೆ ವಿವರಗಳು? ಹಿಂದೂ ವಿಶ್ವ ಕಿಡ್ನಿ ದಿನ!!

ಸದ್ಯದಲ್ಲಿ ಚಾಲಕರ ಹಿತ ಮೆಟ್ರೋ ರೈಲು ಆಗಮನ!