ಅಯೋಧ್ಯೆ ರಾಮಮಂದಿರಕ್ಕೆ ನಟ ಪ್ರಭಾಸ್ 50 ಕೋಟಿ ರೂ. ದೇಣಿಗೆ? ಊಟದ ಖರ್ಚು ಪೂರ್ತಿ ಯಂಗ್ ರೆಬೆಲ್ ಸ್ಟಾರ್‌ದಾ?

ಎಲ್ಲರಿಗೂ ನಮಸ್ಕಾರಗಳು,

ಬಹು ನಿರೀಕ್ಷಿತ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಇದೇ ತಿಂಗಳ 22ಕ್ಕೆ ಸಮೀಪಿಸುತ್ತಿದ್ದಂತೆ ಕೋಟ್ಯಂತರ ಭಾರತೀಯರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ. ದೇಶದ ಮೂಲೆ ಮೂಲೆಗಳಿಂದ ಭಕ್ತರು ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಾರೆ.

ರಾಮಮಂದಿರ ತೆರೆಯುವ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸುಮಾರು 300 ಸ್ಥಳಗಳಿಗೆ ಅನ್ನದಾನ ವ್ಯವಸ್ಥೆ ಮಾಡಲಾಗುತ್ತಿದೆ. ದೇವಾಲಯ ತೆರೆಯುವ ದಿನದಂದು ಪ್ರಭಾಸ್ ದೇಣಿಗೆ ನೀಡಲಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಅಯೋಧ್ಯೆ ಪ್ರತಿಷ್ಠಾ ದಿನದಂದು ಆಹಾರದ ವೆಚ್ಚ ಬರೋಬ್ಬರಿ 50 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಪ್ರಭಾಸ್ ಸಂಪೂರ್ಣ ವೆಚ್ಚವನ್ನು ಭರಿಸಲು ನಿರ್ಧರಿಸುವ ಮೂಲಕ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ಭಕ್ತರಿಗೆ ಔತಣವನ್ನು ಏರ್ಪಡಿಸುವ ವ್ಯವಸ್ಥೆ ವಹಿಸಿಕೊಂಡಿದ್ದಾರೆ . ಸುಮಾರು 50 ಕೋಟಿ ರೂಪಾಯಿಗಳ ಅಂದಾಜು ವೆಚ್ಚದೊಂದಿಗೆ ನಟನು ಊಟಕ್ಕೆ ಹಣವನ್ನು ನೀಡುತ್ತಾರೆ ಎನ್ನಲಾಗಿದೆ. ಆದರೆ, ಇದು ಸುಳ್ಳು ಸುದ್ದಿ ಎಂದು ರಾಷ್ಟ್ರೀಯ ಮಾಧ್ಯಮವೊಂದು, ನಟನ ತಂಡದೊಂದಿಗೆ ಮಾತನಾಡಿ ಸ್ಪಷ್ಟಪಡಿಸಿದೆ. 

ಪ್ರಭಾಸ್ ಅತ್ಯಂತ ಜನಪ್ರಿಯ ನಟ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಅದಕ್ಕೂ ಮಿಗಿಲಾಗಿ ಅನೇಕ ಒಳ್ಳೆಯ ಗುಣಗಳನ್ನು ಹೊಂದಿರುವ ವ್ಯಕ್ತಿ. ರೆಬೆಲ್ ಸ್ಟಾರ್ ಕೃಷ್ಣಂ ರಾಜು ಮತ್ತು ಅವರ ಉತ್ತರಾಧಿಕಾರಿ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್. ಸಹನಟರಿಂದ ಹಿಡಿದು ಸೆಟ್ ಬಾಯ್ ವರೆಗೆ ಹಲವರು ಪ್ರಭಾಸ್ ಮನೆಯಲ್ಲಿ ಊಟ ಮಾಡಿದ್ದಾರೆ. ಪ್ರಭಾಸ್ ಚಿತ್ರೀಕರಣದಲ್ಲಿ ಭಾಗವಹಿಸಿದಾಗ, ಅವರು ಸೆಟ್‌ನಲ್ಲಿ ಏನು ತಿನ್ನುತ್ತಾರೆಯೋ ಅದೇ ಆಹಾರವನ್ನು ತಮ್ಮ ಸೆಟ್‌ನಲ್ಲಿರುವ ಎಲ್ಲರಿಗೂ ತಯಾರಿಸಲಾಗುತ್ತಂತೆ. ಕೃಷ್ಣಂ ರಾಜು ಅವರ ನಿಧನದ ನಂತರ ಪ್ರಭಾಸ್ ಕೂಡ ಲಕ್ಷಾಂತರ ಜನರಿಗೆ ಊಟ ಹಾಕಿದ್ದಾರೆ.

IndiaToday ಈ ಹೇಳಿಕೆಗಳ ಹಿಂದಿನ ಸತ್ಯವನ್ನು ತಿಳಿಯಲು ಪ್ರಭಾಸ್ ತಂಡದ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದೆ. ಮೂಲವು ವದಂತಿಗಳನ್ನು ತಳ್ಳಿಹಾಕಿದೆ "ನಕಲಿ ಸುದ್ದಿ" ಎಂದು ಕರೆದಿದೆ. ಈ ಹೇಳಿಕೆಗಳ ಹಿಂದಿನ ಸತ್ಯವನ್ನು ತಿಳಿಯಲು ಪ್ರಭಾಸ್ ತಂಡದ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದೆ.

ಇದೇ ತಿಂಗಳ 22ರಂದು ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮ ಮಂದಿರ ಉದ್ಘಾಟನೆಯಾಗಲಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಮ ಮಂದಿರವನ್ನು ದೇಶ-ವಿದೇಶದ ರಾಮ ಭಕ್ತರು ದೇಣಿಗೆ ರೂಪದಲ್ಲಿ ನೀಡಿರುವ ಹಣದಿಂದಲೇ ನಿರ್ಮಿಸಲಾಗಿದ್ದು, ಇದಕ್ಕೆ ಸರಕಾರದ ಹಣವನ್ನು ವ್ಯಯಿಸಿಲ್ಲ ಎಂಬುದನ್ನು ಈಗಾಗಲೇ ಕೇಂದ್ರ ಸರಕಾರವೂ ಸ್ಪಷ್ಪಪಡಿಸಿದೆ. ಈಗಾಗಲೇ ದೇಶ-ವಿದೇಶದ ಗಣ್ಯರನ್ನು ಮಂತ್ರಾಕ್ಷತೆಯೊಂದಿಗೆ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಚಿತ್ರ ನಟರು, ಕ್ರಿಕೆಟಿಗರು, ಉದ್ಯಮಿಗಳು ಸೇರಿ ಅನೇಕ ದಿಗ್ಗಜರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 

ಮೈಸೂರು ಮೂಲದ ಶಿಲ್ಪಿ ಅರುಣ ಯೋಗರಾಜ್ ಅವರು ರಾಮ್‌ಲಲ್ಲಾ ಮೂರ್ತಿ ಮಂದಿರದಲ್ಲಿ ಪ್ರತಿಷ್ಟಾನೆಯಾಗಲಿದ್ದು, ರಾಮನೊಂದಿಗೆ ವಿಧ ವಿಧವಾಗಿ ಕನೆಕ್ಟ್ ಆಗಿರುವ ಕರುನಾಡ ಜನತೆಗೆ ಮತ್ತಷ್ಟು ಸಂತೋಷ ನೀಡಿದೆ.

ಧನ್ಯವಾದ....,

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚೀನಾದಲ್ಲಿ ಶುರು ಆಯ್ತು ಹೊಸ ತಳಿ ನ್ಯೂಮೋನಿಯಾ ಆತಂಕ

ಕಂಡಲ್ಲೆಲ್ಲ ಕಲ್ಲಂಗಡಿ ದರ್ಬಾರ್!

ಕೆಪಿಸಿಎಲ್ ಉದ್ಯೋಗಾಂಕ್ಷಿಗಳಿಗೆ ನಿರಾಸೆ!?