ಸಿಲಿಂಡರ್ ಸಬ್ಸಿಡಿ ಯೋಜನೆ!!!

ಎಲ್ಲರಿಗೂ ನಮಸ್ಕಾರ, 
ಹೊಸ ವರ್ಷದ ಹುಡುಗರೇ ಸಾಕಾರವಾಗುತ್ತಿದೆ ಮೋದಿ ಯವರ ಗ್ಯಾರಂಟಿ!!!
450 ರೂ ಅಡುಗೆ ಅನಿಲ ಸಿಲಿಂಡರ್ ಕೊಡುವುದಾಗಿ ಉಜ್ವಲ ಯೋಜನೆ ಅಡಿಯಲ್ಲಿ ಮೋದಿಯವರು ತಿಳಿಸಿದ್ದಾರೆ.
ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ಯೋಜನೆ 2024 ರ ಜನವರಿ ಒಂದರಿಂದ ಆರಂಭವಾಗುತ್ತಿದೆ ಎಂದು ಮೋದಿಯವರು ತಿಳಿಸಿದ್ದಾರೆ.
ಉಜ್ವಲ ಮತ್ತು ಇತರ ಬಡ ಕುಟುಂಬಗಳ ಬಿಪಿಎಲ್ ಮಹಿಳೆಯರಿಗೆ ಮಾತ್ರ 450ಕ್ಕೆ ಪ್ರತಿ ತಿಂಗಳು ಒಂದು ಅಡುಗೆ ಅನಿಲ ಸಿಲೆಂಡರ್ ಸಿಗಲಿದೆ. ಈ ಬಿಪಿಎಲ್ ದಾರಾರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಿವೆ. 
ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗ್ಯಾರಂಟಿಗೆ ರಾಜ್ಯ ಸರ್ಕಾರ ಸಹಕಾರ ರೂಪ ನೀಡುತ್ತಿದೆ. ರಾಜಸ್ಥಾನದಲ್ಲಿ ಹೊಸ ವರ್ಷದಿಂದ ಉಜ್ವಲ ಮತ್ತು ಇತರ ಬಡ ಕುಟುಂಬಗಳಿಗೆ ಎಲ್ಲಕ್ಕಿಂತ ಕಡಿಮೆ ದರದಲ್ಲಿ ಅಡುಗೆ ಅನಿಲ ಸಿಲೆಂಡರ್ ಕೇವಲ 450ಗಳಿಗೆ ಸಿಗಲಿದೆ. ಈ ಉಪಕ್ರಮ ಮಹಿಳಾ ಸಬಲೀಕರಣದ ದಿಸೆಯಲ್ಲಿ ಒಂದು ವಿನಮ್ರ ಪ್ರಯತ್ನವಾಗಿದೆ ,ಎಂದು ರಾಜಸ್ಥಾನದಲ್ಲಿನ ಮುಖ್ಯಮಂತ್ರಿಯಾದ ಭಜನ್ ಲಾಲ್ ಶರ್ಮ ರವರು ತಿಳಿಸಿದ್ದಾರೆ.
ವರ್ಷದ ಕೊನೆ 'ಮನ್ ಕಿ ಬಾತ್ 'ನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ ಬೆಳೆಯುತ್ತಿರುವ ,ಆತ್ಮವಿಶ್ವಾಸ ಸಾವಲಂಬನೆ ವಿಕಸಿತ ಭಾರತದ ಚೈತನ್ಯ ಈ ವರ್ಷದ ಕೊನೆಯ ಹಾಗೂ ಒಟ್ಟಾರೆ 108ನೇ' ಮನ್ ಕಿ ಬಾತ್ 'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದ ಬೆಳೆಯುತ್ತಿರುವ ಬದ್ಧತೆಯನ್ನು ಪ್ರತಿಪಾದಿಸಿದರು. ವಿಕಸಿತ ಭಾರತದ ಚೈತನ್ಯವನ್ನು ಒತ್ತಿ ಹೇಳಿದ ಮೋದಿ ಇದೆ ಬಿರುಸನ್ನು 2024ರಲ್ಲೂ ಉಳಿಸಿಕೊಂಡು ಹೋಗುವುದು ಅಗತ್ಯ ಎಂದರು. ಭಾರತದ ರೇಡಿಯೋ ಕಾರ್ಯಕ್ರಮದಲ್ಲಿ ಉಪಕ್ರಮದ ಭಾಗವಾಗಿ ದೈಹಿಕ ಹಾಗು ಮಾನಸಿಕ ಸದೃಢತೆಯ ಒಂದು ಕಾರ್ಯಕ್ರಮವನ್ನು ಪ್ರಸಾರ ಮಾಡಲಾಯಿತು. ಪ್ರಸಿದ್ಧ ವ್ಯಕ್ತಿಗಳಾದ ಇಶಾ ಫೌಂಡೇಶನ್ ಸಂಸ್ಥಾಪಕ' ಸದ್ಗುರು' ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ 'ಗ್ರಾಂಡ್ ಮಾಸ್ಟರ್ ವಿಶ್ವನಾಥನ ಆನಂದ್' ಮತ್ತು ನಟನ 'ಅಕ್ಷಯ್ ಕುಮಾರ್' ಮೊದಲದವರು ಸದೃಢತೆ ಕುರಿತು ಹಲವು ಟಿಪ್ಸ್ ಗಳನ್ನು ಹಂಚಿಕೊಂಡಿದ್ದರು. ಧಾರ್ಮಿಕ ಆಧ್ಯಾತ್ಮಿಕ ಸಹಿತ 108 ಸಂಖ್ಯೆ ಅನೇಕ ರೀತಿಯಲ್ಲಿ ಮಹತ್ವವನ್ನು ಹೊಂದಿರುವುದರಿಂದ' ಮನ್ ಕಿ ಬಾತ್' ನ 108ನೇ ಆವೃತ್ತಿಯು ತಮಗೆ ಅತ್ಯಂತ ಮಹತ್ವವಾಗಿದೆ. ಇಂದು ಪ್ರಧಾನಿ ಉಲ್ಲೇಖಿಸಿದರು 108 ಸಂಚಿಕೆಗಳಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯ ಅನೇಕ ಉದಾರಣೆಗಳನ್ನು ನೋಡಿದ್ದೇವೆ ,ಹಾಗೂ ಅವರಿಂದ ಸ್ಪೂರ್ತಿ ಪಡೆದಿದ್ದೇವೆ .ಇದೀಗ ಮುನ್ನಡೆಯಲು ಹೊಸ ಸಂಕಲ್ಪ ತೊಡಬೇಕಾಗಿದೆ ಎಂದರು.
ನಾವೆಲ್ಲ ಒಟ್ಟಾಗಿ ಕೆಲಸ ಮಾಡಿದ್ದು ದೇಶದ ಅಭಿವೃದ್ಧಿ ಪಥದ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದು ಪ್ರಧಾನಿ ಅಭಿಪ್ರಾಯ ಪಟ್ಟರು . 'ಆಜಾದಿ ಕಾ ಅಮೃತ ಮಹೋತ್ಸವ 'ಮತ್ತು 'ಮೇರಿ ನಾಟಿ ಮೇರಾ ದೇಶ್' ಮುಂತಾದ ಯಶಸ್ವಿ ಅಭಿಯಾನಗಳಿಗೆ ದೇಶ ಸಾಕ್ಷಿಯಾಗಿದೆ .ಆವಿಷ್ಕಾರಕ್ಕೆ ಮಹತ್ವ ನೀಡದ ಯಾವುದೇ ದೇಶದ ಅಭಿವೃದ್ಧಿ ಸಾಗಿ ತಗೊಳ್ಳುತ್ತದೆ , ಎಂದು ತಾವು ಸದಾ ಪ್ರತಿಪಾದಿಸುತ್ತಿರುವುದಾಗಿ ಹೇಳಿದ ಪ್ರಧಾನಿ ಭಾರತ ಆವಿಷ್ಕಾರ ಕೇಂದ್ರವಾಗಿ ಹೊರಹೊಮ್ಮಿ ಇರುವುದರಿಂದ ಅದು ಸ್ಥಗಿತಗೊಳ್ಳುವುದಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದರು.
ಭಾರತದ ಪ್ರಯತ್ನಗಳಿಂದಾಗಿ 2023 ರನ್ನು ಅಂತರಾಷ್ಟ್ರೀಯ ಸಿರಧಾನ್ಯಗಳ ವರ್ಷವನ್ನಾಗಿ ಆಚರಿಸಲಾಯಿತು, ಎನ್ನು ಮೋದಿ ನೆನಪಿಸಿದರು. ಇದು ಸಿರಿಧಾನ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕ ಸ್ಪಾಟ್ ಗಳಿಗೆ ಅವಕಾಶ ಒದಗಿಸಿದೆ ಕಂಪನಿಗಳ ಯುವ ಜನರು ಆರೋಗ್ಯಕರ ಆಹಾರಗಳು ಗಾಗಿ ಹೊಸ ಆವಿಷ್ಕಾರಗಳನ್ನು ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಧನ್ಯವಾದ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು?!!

ಕಿಡ್ನಿಯ ಬಗ್ಗೆ ವಿವರಗಳು? ಹಿಂದೂ ವಿಶ್ವ ಕಿಡ್ನಿ ದಿನ!!

ಸದ್ಯದಲ್ಲಿ ಚಾಲಕರ ಹಿತ ಮೆಟ್ರೋ ರೈಲು ಆಗಮನ!