ಚಿಕನ್ ಬಿರಿಯಾನಿಯಲ್ಲಿ ಪೀಸ್ ಗಳೇ ಇರಲಿಲ್ಲ.....!!!

ಎಲ್ಲರಿಗೂ ನಮಸ್ಕಾರ,
ಚಿಕನ್ ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ?? ನಾನ್ ವೆಜ್ ಪ್ರಿಯರು ತುಂಬಾ ಇಷ್ಟ ಪಟ್ಟು ತಿನ್ನುವ ಆಹಾರವೆಂದರೆ ಬಿರಿಯಾನಿ.
ಚಿಕನ್ ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ?? ನಾನ್ ವೆಜ್ ಪ್ರಿಯರು ತುಂಬಾ ಇಷ್ಟ ಪಟ್ಟು ತಿನ್ನುವ ಆಹಾರವೆಂದರೆ ಬಿರಿಯಾನಿ.
ಅದೇ ರೀತಿ ರೆಸ್ಟೋರೆಂಟ್ ಗೆ ಹೋಗಿದ್ದ  ಇಲ್ಲೊಬ್ಬ ಗ್ರಾಹಕ ಬಿರಿಯಾನಿಯಲ್ಲಿ ಪ್ಲೀಸ್ ಇರಲಿಲ್ಲವೆಂದು ಕೋರ್ಟ್ ಮೆಟ್ಟಿಲೇರಿ ಗೆದ್ದು ಬಂದಿದ್ದಾನೆ.
ಮಾಂಸವಿಲ್ಲದ ಚಿಕನ್ ಬಿರಿಯಾನಿ ನೀಡಿದ ರೆಸ್ಟೋರೆಂಟ್ ಗೆ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ. ಅಲ್ಲದೆ ಯಾವುದೇ ವಕೀಲರಿಲ್ಲದೆ ವಾದ ಮಂಡಿಸಿದ ಗ್ರಾಹಕನಿಗೆ ,150ರೂ ಮರುಪಾವತಿ ಮಾಡುವುದರ ಜೊತೆಗೆ ಸಾವಿರ ರೂಗಳನ್ನು ದಂಡವನ್ನಾಗಿ ಪಾವತಿಸುವಂತೆ ರೆಸ್ಟೋರೆಂಟ್ ಗೆ ಆದೇಶಿಸಿದೆ. 2023ರ ಏಪ್ರಿಲ್ 2 ರಂದು ನಾಗರಬಾವಿ ನಿವಾಸಿ ಕೃಷ್ಣಪ್ಪ ಎಂಬಾತ ಮನೆಯಲ್ಲಿ ಅಡುಗೆ ಅನಿಲ ಖಾಲಿಯಾದ ಕಾರಣ ಹೆಂಡತಿಯೊಂದಿಗೆ ಐಟಿಐ ಲೇಔಟ್ ನ ಹೋಟೆಲ್ ಗೆ ತೆರಳಿ ಚಿಕನ್ ಬಿರಿಯಾನಿ ಆರ್ಡರ್ ಮಾಡಿ 150ರೂ ಪಾವತಿಸಿ ಪಾರ್ಸೆಲ್ ತಂದಿದ್ದರು. ಪಾರ್ಸೆಲ್ ತೆಗೆದು ನೋಡಿದರೆ ಅದರಲ್ಲಿ ಒಂದೇ ಒಂದು ಚಿಕನ್ ಪೀಸ್ ಇರಲಿಲ್ಲ ,ಬದಲಾಗಿ ಬಿರಿಯಾನಿ ಅನ್ನ ನೀಡಲಾಗಿತ್ತು .ಕೂಡಲೇ ಕೃಷ್ಣಪ್ಪ ರೆಸ್ಟೋರೆಂಟ್ ಗೆ ಕರೆ ಮಾಡಿದ್ದರು, ಅವರು ಬೇರೆ ಬಿರಿಯಾನಿ ಪಾರ್ಸಲ್ ತಂದು ಕೊಡುವುದು ಎಂದು ತಿಳಿಸಿದರು .ಸತತ ಎರಡು ಗಂಟೆಗಳ ಕಾಲ ಪಾರ್ಸೆಲ್ ಗಾಗಿ ಕಾದು ಕುಳಿತ ದಂಪತಿ ನಂತರ ಕಾಲಿ ಬಿರಿಯಾನಿ ತಿಂದರು . ಬಳಿಕ ಮತ್ತೆ ರೆಸ್ಟೋರೆಂಟ್ಗೆ ಕರೆ ಮಾಡಿದ್ದರು ಯಾವುದೇ ಉತ್ತರ ನೀಡಿಲ್ಲ. 
ಹಾಗಾಗಿ ಹೋಟೆಲ್ ಗೆ ನೋಟಿಸ್ ಕಳಿಸಿದ್ದರು. ಅದಕ್ಕೂ ಯಾವುದೇ ಪ್ರಕ್ರಿಯೆ ನೀಡಲಿಲ್ಲ. ಬಳಿಕ ಅವರು ಶಾಂತಿನಗರದ ಬೆಂಗಳೂರು ನಗರ ಜಿಲ್ಲಾ "ಗ್ರಾಹಕರ ವ್ಯಾಜ್ಯಗಳ ಪರಿಹಾರ ಆರೋಗ್ಯಕ್ಕೆ" ಹೋಟೆಲ್ ಮಾಲೀಕರ ವಿರುದ್ಧ ದೂರು ನೀಡಿ ಸಾವಿರ ರೂ ಪರಿಹಾರಕ್ಕೆ ಅಗ್ರಹಿಸಿದರು .ಕೃಷ್ಣಪ್ಪ ಯಾವುದೇ ವಕೀಲರನ್ನು ನೇಮಿಸಿಕೊಳ್ಳದೆ ಸ್ವಂತವಾಗಿ ವಾದ ಮಂಡಿಸಿದರು . ಬಿರಿಯಾನಿಯಲ್ಲಿ ಯಾವುದೇ ತುಂಡುಗಳು ಇರಲಿಲ್ಲ, ಎಂದು ಸಾಬೀತುಪಡಿಸಲು ಮೊಬೈಲ್ ನಲ್ಲಿ ಸೆರೆ ಹಿಡಿದ ಫೋಟೋ ಸೇರಿ ಇತರೆ ದಾಖಲೆಗಳನ್ನು ಒದಗಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮನೆಯಲ್ಲಿ ಅಡಿಕೆ ಅನಿಲ ಖಾಲಿಯಾದ ದಂಪತಿಗೆ ಈ ರೀತಿ ಘಟನೆ ಸಂಭವಿಸಿದ್ದು ಮಾನಸಿಕವಾಗಿ ಆತನೇ ತಂದೊಡ್ಡಿದೆ ಎನ್ನುವುದನ್ನು ಗಮನಿಸಿತು. ರೆಸ್ಟೋರೆಂಟ್ ತಿಳಿದೇ ತಿಳಿಯದೆ ತಪ್ಪು ಮಾಡಿದ್ದು ಗ್ರಾಹಕರಿಗೆ ಸರಿಯಾದ ಸೇವೆ ನೀಡಿಲ್ಲ ಹೀಗಾಗಿ ದಂಡ ವಿಧಿಸಿ ಆದೇಶಿಸಿದೆ. ಮತ್ತೆ ಇಂತಹ ತಪ್ಪು ಮರು ಕಳಿಸದಂತೆ ಎಚ್ಚರಿಕೆ ನೀಡಿದೆ.
 ನಿಮಗೆಂದಾದರೂ ಈ ರೀತಿ ಅನುಭವಗಳಿದ್ದರೆ ನಮ್ಮ ಜೊತೆ ಶೇರ್ ಮಾಡಿ ಕಮೆಂಟ್ ಮಾಡಿ ತಿಳಿಸಿ. ಇದೇ ರೀತಿ ಬೇರೆ ಬೇರೆ ವಿಷಯಗಳಿಗೆ ನನ್ನನ್ನು ಸಪೋರ್ಟ್ ಮಾಡಿ . ಧನ್ಯವಾದಗಳು,

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚೀನಾದಲ್ಲಿ ಶುರು ಆಯ್ತು ಹೊಸ ತಳಿ ನ್ಯೂಮೋನಿಯಾ ಆತಂಕ

ಕಂಡಲ್ಲೆಲ್ಲ ಕಲ್ಲಂಗಡಿ ದರ್ಬಾರ್!

ಕೆಪಿಸಿಎಲ್ ಉದ್ಯೋಗಾಂಕ್ಷಿಗಳಿಗೆ ನಿರಾಸೆ!?