ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು?!!

ಎಲ್ಲರಿಗೂ ನಮಸ್ಕಾರಗಳು,

ಮಕ್ಕಳಿಗೆ ಪರೀಕ್ಷೆಯ ಹತ್ತಿರ ಬರುತ್ತಿದೆ ಓದಿದ್ದೆಲ್ಲ ನೆನಪಿದ್ದರೆ ಸಾಕು ಎಂಬ ಭಾವನೆ ಎಲ್ಲರಿಗೂ ಇರುತ್ತದೆ. ಹಾಗಾಗಿ ಇಂದು ನಾವು ನೆನಪಿನ ಶಕ್ತಿಯನ್ನು ಹೆಚ್ಚಿಸಲು ತೆಗೆದುಕೊಳ್ಳಬಹುದು ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ. ಈ ಕ್ರಮಗಳಿಂದ ಕೇವಲ ನೆನಪನ ಶಕ್ತಿ ಅಷ್ಟ ಅಲ್ಲ ಮೆದುಳಿನ ಆರೋಗ್ಯದ ವೃತ್ತಿಯೂ ಕೂಡ ಆಗುತ್ತದೆ. ಮನಸ್ಸು ಧನಾತ್ಮಕ ರೀತಿಯಲ್ಲಿ ಬದಲಾಗಲು ಸಹಾಯವಾಗುತ್ತದೆ. ಈ ವಿಷಯದಲ್ಲಿ ಆಹಾರ ಕೆಲವು ದಿನಚರಿಯ ಕ್ರಿಯೆಗಳು ಜೀವನ ಶೈಲಿ ಮತ್ತು ಕೆಲವು ಔಷಧಿಗಳು ತುಂಬಾ ಸಹಕಾರಿಯಾಗುತ್ತದೆ. 
* ಶುದ್ಧ ದೇಸಿ ಹಸುವಿನ ಹಾಲಿನ ತುಪ್ಪ ವಾದರಂತೂ ಅಮೃತ ಸಮಾನವೇ ಸರಿ. ಹಾಗಾಗಿ ಮಕ್ಕಳಿಗೆ ನಿತ್ಯವೂ ಒಂದೆರಡು ಚಮಚವಾದರೂ ತುಪ್ಪವನ್ನು ಉಳಿದ ಆಹಾರದ ಜೊತೆಗೆ ಕೊಡಬೇಕು.
* ವಾನೆಟ್, ಬಾದಾಮಿ, ಗೋಡಂಬಿ ಅಂತ ನಟ್ ಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಸಹಕಾರಿ. 
* ಬೂದುಕುಂಬಳಕಾಯಿ ಅತ್ಯಂತ ಮೇಧ್ಯವೆಂದು ಆಯುರ್ವೇದ ಹೇಳುತ್ತದೆ. ಹಾಗಾಗಿ ಬೂದು ಕುಂಬಳಕಾಯಿಯ ಹಲ್ವಾ ಅಥವಾ ಲೇಹ್ಯ ಮಾಡಿ ನಿತ್ಯವೋ ಮಕ್ಕಳಿಗೆ ರುಚಿಯಾದ ಒಂದು ಖಾದ್ಯದ ಪ್ರೀತಿಯಲ್ಲಿ ಕೊಡಬಹುದು.
* ನಿತ್ಯವೂ ಬ್ರಾಹ್ಮಿ ಅಥವಾ ಒಂದೆಲಗದ ಜ್ಯೂಸನ್ನು ಅರ್ಧ ಲೋಟದಷ್ಟು ಪ್ರಮಾಣದಲ್ಲಿ ಮಕ್ಕಳಿಗೆ ಕೊಡಬಹುದು. ಆದರೆ ನಿಮ್ಮ ವೈದ್ಯರ ಸಾಲಹೆ ಇಲ್ಲದೆ ಒಂದು ದಿನದಲ್ಲಿ ಐದಕ್ಕಿಂತ ಹೆಚ್ಚು ಎಲೆಗಳನ್ನು ಕೊಡುವುದು ಬೇಡ . 
* ದಿನಕ್ಕೆ ಕನಿಷ್ಠ 20 ನಿಮಿಷಗಳ ಕಾಲ ಹಾಸನ, ಪ್ರಾಣಯಾಮಗಳನ್ನು ಅಭ್ಯಾಸ ಮಾಡುವಂತೆ ಮಕ್ಕಳಿಗೆ . ಹೆಬ್ಬೆರಳು ಮತ್ತು ಕೈ ಸೇರಿಸಿ ಮಾಡುವ ಹಾಸನ ದಿನದಲ್ಲಿ 10 ನಿಮಿಷ ಹಾಕಿ ಕುಳಿತುಕೊಂಡರೆ ಮಾನಸಿಕ ಒತ್ತಡ ಕಡಿಮೆಯಾಗಿ ನೆನಪಿನ ಶಕ್ತಿ ಹೆಚ್ಚುತ್ತದೆ . ಹಾಗಾಗಿ 
*ನೆನಪಿನ ಶಕ್ತಿಯನ್ನು ಬಳಸಿ ಆಡುವ ಆಟಗಳು ಅಥವಾ ವಿವಿದ ರೀತಿಯ ಮನೋರಂಜನೆಗಳಿಗಾಗಿ ದಿನದಲ್ಲಿ ಕೆಲ ಸಮಯವನ್ನಾದರೂ ಮೀಸಲಿಡಬೇಕು. ಆದರೆ ಯಾವುದೇ ಕಾರಣಕ್ಕೂ ನೆನಪಿನ ಶಕ್ತಿ ಎಷ್ಟಿದೆ ಎಂದು ಅಳೆಯುವುದಾಗಲಿ ಪರೀಕ್ಷೆ ಮಾಡುವುದಾಗಲಿ ಮಾಡಬಾರದು. ನಿಮ್ಮ ಮಕ್ಕಳ ಎದುರಿಗೆ ನೀನು ನನಗೆ ನೆನಪಿನ ಶಕ್ತಿ ಕಡಿಮೆ ಎಂದು ಅಥವಾ ಯಾರಾದರೂ ಜೊತೆ ಮಾತನಾಡುವಾಗ ನನ್ನ ಮಗನಿಗೆ ನೆನಪಿನ ಶಕ್ತಿ ಕಡಿಮೆ ಇದೆ ಎಂದು ಯಾವುದೇ ಕಾರಣಕ್ಕೂ ಹೇಳಬೇಡಿ. ಇದರಿಂದ ಆತ್ಮವಿಶ್ವಾಸ ಹೊರಟು ಹೋಗಿ ನಿಮ್ಮ ಮಗು ಎಲ್ಲದರಲ್ಲೂ ಸೋಲು ಉಂಟಾಗುತ್ತದೆ.
ಮಕ್ಕಳಿಗೆ ಒಳ್ಳೆಯ ಪ್ರಮಾಣದಲ್ಲಿ ಸುಖಕರವಾದ ನಿದ್ದೆ ಹಾಗೂವಂತೆ ನೋಡಿಕೊಳ್ಳಬೇಕು. ಕನಿಷ್ಠ 7 ತಾಸು ನಿದ್ದೆ ಮಾಡಲೇಬೇಕು.
 ನೆನಪಿನ ಶಕ್ತಿ ಅಥವಾ ಏಕಾಗ್ರತೆಯನ್ನು ಹಾಳು ಮಾಡುವ ಅತ್ಯಂತ ದೊಡ್ಡ ಅಸ್ತ್ರವೆಂದರೆ ಗಮನ ಬಂಗ ಅಂದರೆ ಹೋಂವರ್ಕ್ ಅಥವಾ ಅಭ್ಯಾಸ ಮಾಡುವಾಗ ಗಮನ ಒಂದು ಕ್ಷಣವೂ ಬೇರೆ ಕಡೆ ಹೋಗದೆ ಇರುವಂತೆ ಟಿವಿ ಅಥವಾ ಮೊಬೈಲ್ಗಳ ಬಳಕೆ ಮಾಡದಿರುವುದು . ಹಾಗಾಗಿ ನಿಮ್ಮ ಮಕ್ಕಳಿಗೆ ಮೊಬೈಲ್ ಕೊಡುವುದಾದರೂ ಇಷ್ಟು ಸಮಯ ಎಂದು ನಿರ್ಧಾರ ಮಾಡಿ ದಿನಕ್ಕೊಮ್ಮೆ ಆ ಸಮಯದಲ್ಲಿ ಮಾತ್ರ ಕೊಡಿ . ಅಧ್ಯಯನದ ಸಮಯದಲ್ಲಿ ಮೊಬೈಲ್ ಅಥವಾ ಟಿವಿ ಅಕ್ಕ ಪಕ್ಕದಲ್ಲಿ ಯಾವುದೇ ಕಾರಣಕ್ಕೂ ಇರಬಾರದು .
* ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಅಧ್ಯಯನ ಮಾಡಿದರೆ ಒಳ್ಳೆಯದು. ಆಗ ಎದ್ದು ಅಧ್ಯಯನ ಮಾಡಿದ್ದು ಚೆನ್ನಾಗಿ ನೆನಪಿನಲ್ಲಿ ಇರುತ್ತದೆ , ಎಂದು ಶಾಸ್ತ್ರಗಳು ಹೇಳುತ್ತವೆ . ಇದನ್ನ ನೀವು ನಿಮ್ಮ ಮಕ್ಕಳಲ್ಲಿ ಅಳವಡಿಸಿದರೆ ಖಂಡಿತ ನಿಮ್ಮ ಮಕ್ಕಳಲ್ಲಿ ನೆನಪಿನ ಶಕ್ತಿ ಮತ್ತು ಬುದ್ಧಿ ಶಕ್ತಿಯು ಹೆಚ್ಚಾಗುವುದು ಗ್ಯಾರಂಟಿ.
 ಧನ್ಯವಾದಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚೀನಾದಲ್ಲಿ ಶುರು ಆಯ್ತು ಹೊಸ ತಳಿ ನ್ಯೂಮೋನಿಯಾ ಆತಂಕ

ಕಂಡಲ್ಲೆಲ್ಲ ಕಲ್ಲಂಗಡಿ ದರ್ಬಾರ್!

ಕೆಪಿಸಿಎಲ್ ಉದ್ಯೋಗಾಂಕ್ಷಿಗಳಿಗೆ ನಿರಾಸೆ!?